alex Certify ಸೈಕ್ಲಿಂಗ್‌ನಿಂದ ಶುರುವಾಗಿ ಮದುವೆಯಲ್ಲಿ ಅಂತ್ಯವಾದ ಪ್ರಣಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕ್ಲಿಂಗ್‌ನಿಂದ ಶುರುವಾಗಿ ಮದುವೆಯಲ್ಲಿ ಅಂತ್ಯವಾದ ಪ್ರಣಯ

Image result for It Started With Cycling, Now They're Married: Indore Couple's Roller Coaster Love Story in Times of Pandemic

ಅವರಿಬ್ಬರು ಭೇಟಿಯಾದರು, ಮಾತನಾಡಿದರು, ಪ್ರೇಮಪಾಶದಲ್ಲಿ ಬಿದ್ದರು, ಇದಾದ ಮೇಲೆ ಪರಸ್ಪರ ಜೀವನವನ್ನು ಹಂಚಿಕೊಳ್ಳಲು ನಿರ್ಧರಿಸಿದರು. ಇಂದೋರ್‌‌ನ ವೀರೇಂದ್ರ ಪ್ರತಾಪ್ ಸಿಂಗ್ ಹಾಗೂ ಮೀನಾಕ್ಷಿ ಸಿಂಗ್ ಭಗೇಲ್‌ ಅವರ ಪ್ರೇಮಕಥನ ಬಹಳ ವಿಶಿಷ್ಟವಾದದ್ದು.

ಕಳೆದ ಮಾರ್ಚ್‌ನಲ್ಲಿ ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಜಗತ್ತಿನಾದ್ಯಂತ ಬದುಕಿನ ಹೊಸ ಮಜಲು ತೆರೆದುಕೊಂಡಿತ್ತು. ನಮ್ಮ ನಮ್ಮ ಮನೆಗಳಲ್ಲೇ ಬಂಧಿಯಾದ ನಾವೆಲ್ಲಾ ಸ್ಥಬ್ಧ ಜಗತ್ತನ್ನು ಅಸಹಾಯಕರಾಗಿ ನೋಡುತ್ತಿದ್ದೆವು.

ಗೃಹ ಬಂಧನದಲ್ಲಿದ್ದರಾ ಯುವರಾಣಿ…..?

ಇದೇ ಅವಧಿಯಲ್ಲಿ; ಒಂದೇ ಪ್ರದೇಶದ ನಿವಾಸಿಗಳಾದ ವೀರೇಂದ್ರ ಹಾಗೂ ಮೀನಾಕ್ಷಿ ಸೈಕ್ಲಿಂಗ್ ಮಾಡುತ್ತಾ ಪರಿಚಯವಾದರು. ಆರಂಭದಲ್ಲಿ ಪರಸ್ಪರರ ನೋಟ ನಗುವಾಗಿ ಬದಲಾಗಿ ದಿನಗಳೆಂದರೆ ಹರಟೆ ಮಾಡುವ ಮಟ್ಟಕ್ಕೆ ಬೆಳೆಯಿತು. ಇಬ್ಬರ ನಡುವೆ ಸಲಿಗೆ ಬೆಳೆದು, ಬದುಕಿನ ಮುಂದಿನ ಹಾದಿಯನ್ನು ಒಟ್ಟಾಗಿ ಇಡುವ ನಿರ್ಧಾರಕ್ಕೆ ಬಂದ ವೀರೇಂದ್ರ ಹಾಗೂ ಮೀನಾಕ್ಷಿ ತಂತಮ್ಮ ಕುಟುಂಬಗಳನ್ನು ಓಲೈಸಿ ಮದುವೆ ಮಡಿಕೊಂಡು ಹನಿಮೂನ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...