alex Certify ಮದುವೆ ಸಂಭ್ರಮದಲ್ಲಿದ್ದ ವರನಿಗೆ ಬಿತ್ತು ದಂಡ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಬಿತ್ತು ದಂಡ…!

ಮದುವೆ ಮಾಡಿಕೊಳ್ಳಲು ಸಂಭ್ರಮದಲ್ಲಿ ತೆರಳುತ್ತಿದ್ದ ವರನಿಗೆ ಅಧಿಕಾರಿಗಳು ದಂಡ ವಿಧಿಸಿದ ಪ್ರಸಂಗವೊಂದು ಮಧ್ಯಪ್ರದೇಶದ ಇಂದೋರ್ ಬಳಿ ನಡೆದಿದೆ.

ಕೊರೊನಾ ವೈರಸ್ ಹರಡುವುದನ್ನು ತಡೆಯಲು ನಿಯಮಗಳು ಜಾರಿಯಲ್ಲಿದ್ದು, ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಆದರೆ ವರ ಧರ್ಮೇಂದ್ರ ಹಾಗೂ ಕುಟುಂಬಸ್ಥರು ಫೇಸ್ ಮಾಸ್ಕ್ ಧರಿಸಿರಲಿಲ್ಲ, ಜತೆಗೆ ಒಂದೇ ವಾಹನದಲ್ಲಿ 12 ಮಂದಿ ಇದ್ದರು.

ಜನರು ಸಾಮಾಜಿಕ ಅಂತರ ಕಾಯುವ ನಿಯಮಗಳನ್ನು ಅನುಸರಿಸುತ್ತಾರೆಯೇ ಎಂದು ಅಧಿಕಾರಿಗಳು ವಾಡಿಕೆಯ ತಪಾಸಣೆ ನಡೆಸುತ್ತಿರುವಾಗ ಈ ಮದುವೆ ದಿಬ್ಬಣ ಸಿಕ್ಕಿಬಿದ್ದಿದೆ.

ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದಿದ್ದಕ್ಕಾಗಿ 1,100 ರೂ. ಮತ್ತು ಫೇಸ್ ಮಾಸ್ಕ್ ಧರಿಸದಿದ್ದಕ್ಕಾಗಿ 1,000 ರೂ. ದಂಡ ವಸೂಲಿ ಮಾಡಲಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...