alex Certify ಮನಕಲಕುತ್ತೆ ಭಾರತ – ಪಾಕ್​ ಯುದ್ಧದಲ್ಲಿ ಭಾಗಿಯಾಗಿದ್ದ ಮಾಜಿ ಸೈನಿಕನ ಈ ದುಃಸ್ಥಿತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಕಲಕುತ್ತೆ ಭಾರತ – ಪಾಕ್​ ಯುದ್ಧದಲ್ಲಿ ಭಾಗಿಯಾಗಿದ್ದ ಮಾಜಿ ಸೈನಿಕನ ಈ ದುಃಸ್ಥಿತಿ..!

1971ರಲ್ಲಿ ನಡೆದ ಭಾರತ – ಪಾಕಿಸ್ತಾನ ಯುದ್ಧದಲ್ಲಿ ಸೇವೆ ಸಲ್ಲಿಸಿ ಸ್ಟಾರ್​ ಪದಕವನ್ನೂ ಪಡೆದಿದ್ದ ಯುದ್ಧ ಪರಿಣಿತ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ಹೈದರಾಬಾದ್​​ನಲ್ಲಿ ಆಟೋರಿಕ್ಷಾವನ್ನ ಓಡಿಸುತ್ತಿದ್ದಾರೆ.

ಆರ್ಥಿಕವಾಗಿ ದುರ್ಬಲರಾಗಿರುವ 71 ವರ್ಷದ ಮಾಜಿ ಸೈನಿಕ ಶೇಕ್​ ಅಬ್ದುಲ್​ ಕರೀಂ ಕೋವಿಡ್​ 19 ಸಂಕಷ್ಟದ ನಡುವೆ ಭರವಸೆಯನ್ನ ಕಳೆದುಕೊಳ್ಳದೇ ಜೀವನ ಸಾಗಿಸುತ್ತಿದ್ದಾರೆ.

ಕಛೇರಿಗೆ ಕುದುರೆ ಮೇಲೆ ಬರಲು ಅನುಮತಿ ಕೋರಿ ಪತ್ರ ಬರೆದ ನೌಕರ…!

ತಮ್ಮ ಕುಟುಂಬದ ಹೊಟ್ಟೆಯನ್ನ ತುಂಬಿಸಲಿಕ್ಕೋಸ್ಕರ ಕರೀಂ ಕಳೆದ 6 ವರ್ಷಗಳಿಂದ ಆಟೋರಿಕ್ಷಾ ಓಡಿಸುತ್ತಿದ್ದಾರೆ. ಕರೀಂ ಇಲ್ಲಿಯವರೆಗೆ ಸ್ವಂತ ಸೂರನ್ನ ಹೊಂದೋದು ಹಾಗಿರಲಿ ಒಂದು ತುಂಡು ಭೂಮಿಯನ್ನೂ ಖರೀದಿಸಿಲ್ಲ. ಬಾಡಿಗೆ ಮನೆಯಲ್ಲಿ ಕುಟುಂಬದ ಜೊತೆ ವಾಸಿಸುತ್ತಿದ್ದಾರೆ. ಸೂಪರ್​ವೈಸರ್​, ಸೆಕ್ಯೂರಿಟಿ ಗಾರ್ಡ್​, ಕಾರ್​ ಡ್ರೈವರ್​ ಹೀಗೆ ನಾನಾ ಕೆಲಸಗಳನ್ನ ಮಾಡಿ ಇದೀಗ ಆಟೋರಿಕ್ಷಾ ಓಡಿಸಿ ಕುಟುಂಬ ನಿರ್ವಹಣೆ ಮಾಡ್ತಿದ್ದಾರೆ.

ಆರು ಮಕ್ಕಳ ತಂದೆಯಾಗಿರುವ ಕರೀಂ ತೀವ್ರ ಸಂಕಷ್ಟದಲ್ಲಿದ್ದಾರೆ. ಚಾಲಕನಾಗಿ ಕೆಲಸ ಮಾಡ್ತಿದ್ದ ಕರೀಂ ಗಂಡು ಮಕ್ಕಳು ಕೊರೊನಾ ಬಳಿಕ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಸರ್ಕಾರದ ಬಳಿ 2 ಬಿಹೆಚ್​​ಕೆ ಮನೆಗಾಗಿ ಬೇಡಿಕೆ ಇಟ್ಟಿದ್ದಾರೆ.

ಯುದ್ಧದ ದಿನಗಳನ್ನ ನೆನಪಿಸಿಕೊಂಡ ಕರೀಂ, 1964ರಲ್ಲಿ ಸೇನೆಗೆ ಸೇರ್ಪಡೆಯಾದ ವೇಳೆ ನನಗಿನ್ನು ಚಿಕ್ಕ ವಯಸ್ಸು. ನನ್ನ ತಂದೆ ಮೊದಲು ಬ್ರಿಟಿಷ್​ ಸೇನೆಯಲ್ಲಿದ್ದರು ಬಳಿಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನನ್ನ ತಂದೆ ನಿಧನರಾದ ಬಳಿಕ ನಾನು ಸೈನ್ಯಕ್ಕೆ ಸೇರ್ಪಡೆಯಾದೆ. ಬೆಂಗಳೂರಿನಲ್ಲಿ 3 ವರ್ಷದ ತರಬೇತಿ ಬಳಿಕ ನಾನು 7 ವರ್ಷಗಳ ಕಾಲ ಫಿರೋಜ್​ಪುರದಲ್ಲಿ ಸೇವೆ ಸಲ್ಲಿದೆ. ನಾವು ಪಾಕ್ ವಿರುದ್ಧದ ಯುದ್ಧವನ್ನ ಗೆದ್ದೆವು. ಆದರೆ 1976ರಲ್ಲಿ ಸೇನೆಯಿಂದ ಹೊರಬಂದ ಬಳಿಕ ಜೀವನದ ಯುದ್ಧ ಆರಂಭವಾಯ್ತು ಎಂದು ಅನುಭವ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...