1971ರಲ್ಲಿ ನಡೆದ ಭಾರತ – ಪಾಕಿಸ್ತಾನ ಯುದ್ಧದಲ್ಲಿ ಸೇವೆ ಸಲ್ಲಿಸಿ ಸ್ಟಾರ್ ಪದಕವನ್ನೂ ಪಡೆದಿದ್ದ ಯುದ್ಧ ಪರಿಣಿತ ವ್ಯಕ್ತಿಯೊಬ್ಬರು ಜೀವನೋಪಾಯಕ್ಕಾಗಿ ಹೈದರಾಬಾದ್ನಲ್ಲಿ ಆಟೋರಿಕ್ಷಾವನ್ನ ಓಡಿಸುತ್ತಿದ್ದಾರೆ.
ಆರ್ಥಿಕವಾಗಿ ದುರ್ಬಲರಾಗಿರುವ 71 ವರ್ಷದ ಮಾಜಿ ಸೈನಿಕ ಶೇಕ್ ಅಬ್ದುಲ್ ಕರೀಂ ಕೋವಿಡ್ 19 ಸಂಕಷ್ಟದ ನಡುವೆ ಭರವಸೆಯನ್ನ ಕಳೆದುಕೊಳ್ಳದೇ ಜೀವನ ಸಾಗಿಸುತ್ತಿದ್ದಾರೆ.
ಕಛೇರಿಗೆ ಕುದುರೆ ಮೇಲೆ ಬರಲು ಅನುಮತಿ ಕೋರಿ ಪತ್ರ ಬರೆದ ನೌಕರ…!
ತಮ್ಮ ಕುಟುಂಬದ ಹೊಟ್ಟೆಯನ್ನ ತುಂಬಿಸಲಿಕ್ಕೋಸ್ಕರ ಕರೀಂ ಕಳೆದ 6 ವರ್ಷಗಳಿಂದ ಆಟೋರಿಕ್ಷಾ ಓಡಿಸುತ್ತಿದ್ದಾರೆ. ಕರೀಂ ಇಲ್ಲಿಯವರೆಗೆ ಸ್ವಂತ ಸೂರನ್ನ ಹೊಂದೋದು ಹಾಗಿರಲಿ ಒಂದು ತುಂಡು ಭೂಮಿಯನ್ನೂ ಖರೀದಿಸಿಲ್ಲ. ಬಾಡಿಗೆ ಮನೆಯಲ್ಲಿ ಕುಟುಂಬದ ಜೊತೆ ವಾಸಿಸುತ್ತಿದ್ದಾರೆ. ಸೂಪರ್ವೈಸರ್, ಸೆಕ್ಯೂರಿಟಿ ಗಾರ್ಡ್, ಕಾರ್ ಡ್ರೈವರ್ ಹೀಗೆ ನಾನಾ ಕೆಲಸಗಳನ್ನ ಮಾಡಿ ಇದೀಗ ಆಟೋರಿಕ್ಷಾ ಓಡಿಸಿ ಕುಟುಂಬ ನಿರ್ವಹಣೆ ಮಾಡ್ತಿದ್ದಾರೆ.
ಆರು ಮಕ್ಕಳ ತಂದೆಯಾಗಿರುವ ಕರೀಂ ತೀವ್ರ ಸಂಕಷ್ಟದಲ್ಲಿದ್ದಾರೆ. ಚಾಲಕನಾಗಿ ಕೆಲಸ ಮಾಡ್ತಿದ್ದ ಕರೀಂ ಗಂಡು ಮಕ್ಕಳು ಕೊರೊನಾ ಬಳಿಕ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಸರ್ಕಾರದ ಬಳಿ 2 ಬಿಹೆಚ್ಕೆ ಮನೆಗಾಗಿ ಬೇಡಿಕೆ ಇಟ್ಟಿದ್ದಾರೆ.
ಯುದ್ಧದ ದಿನಗಳನ್ನ ನೆನಪಿಸಿಕೊಂಡ ಕರೀಂ, 1964ರಲ್ಲಿ ಸೇನೆಗೆ ಸೇರ್ಪಡೆಯಾದ ವೇಳೆ ನನಗಿನ್ನು ಚಿಕ್ಕ ವಯಸ್ಸು. ನನ್ನ ತಂದೆ ಮೊದಲು ಬ್ರಿಟಿಷ್ ಸೇನೆಯಲ್ಲಿದ್ದರು ಬಳಿಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನನ್ನ ತಂದೆ ನಿಧನರಾದ ಬಳಿಕ ನಾನು ಸೈನ್ಯಕ್ಕೆ ಸೇರ್ಪಡೆಯಾದೆ. ಬೆಂಗಳೂರಿನಲ್ಲಿ 3 ವರ್ಷದ ತರಬೇತಿ ಬಳಿಕ ನಾನು 7 ವರ್ಷಗಳ ಕಾಲ ಫಿರೋಜ್ಪುರದಲ್ಲಿ ಸೇವೆ ಸಲ್ಲಿದೆ. ನಾವು ಪಾಕ್ ವಿರುದ್ಧದ ಯುದ್ಧವನ್ನ ಗೆದ್ದೆವು. ಆದರೆ 1976ರಲ್ಲಿ ಸೇನೆಯಿಂದ ಹೊರಬಂದ ಬಳಿಕ ಜೀವನದ ಯುದ್ಧ ಆರಂಭವಾಯ್ತು ಎಂದು ಅನುಭವ ಹಂಚಿಕೊಂಡಿದ್ದಾರೆ.