alex Certify ಅಚ್ಚರಿಗೊಳಿಸುತ್ತೆ ಕೊರೊನಾ ಲಸಿಕೆ ಕುರಿತು ಗೂಗಲ್ ನಲ್ಲಿ ಭಾರತೀಯರು ಹುಡುಕಿರುವ ಸಂಗತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ಕೊರೊನಾ ಲಸಿಕೆ ಕುರಿತು ಗೂಗಲ್ ನಲ್ಲಿ ಭಾರತೀಯರು ಹುಡುಕಿರುವ ಸಂಗತಿ…!

ಕೊರೊನಾ ವಿರುದ್ಧ ಈ ವರ್ಷದಿಂದ ಹೊಸ ಯುದ್ಧವನ್ನ ಆರಂಭಿಸಿರುವ ಭಾರತ ಜನವರಿ 16ರಿಂದ ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಆರಂಭಿಸಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗ್ತಿದೆ. ದೆಹಲಿ ಏಮ್ಸ್​ನ ಪೌರ ಕಾರ್ಮಿಕ ಮನೀಷ್​ ಕುಮಾರ್​​ ದೇಶದಲ್ಲೇ ಮೊದಲ ಬಾರಿಗೆ ಲಸಿಕೆ ಪಡೆದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಡೀ ದೇಶದಲ್ಲಿ ಕೊರೊನಾ ಲಸಿಕೆ ಪರ್ವ ಆರಂಭವಾಗಿರುವ ಬೆನ್ನಲ್ಲೇ ಬಹುತೇಕ ಭಾರತೀಯರು ಗೂಗಲ್​​ನಲ್ಲಿ ಮನೆಯಲ್ಲೇ ಕೊರೊನಾ ಲಸಿಕೆ ತಯಾರು ಮಾಡೋದು ಹೇಗೆ ಎಂದು ಸರ್ಚ್​ ಮಾಡಿದ್ದಾರೆ. ಗೂಗಲ್​ ನೀಡಿರುವ ಮಾಹಿತಿ ಪ್ರಕಾರ ಭಾರತೀಯರು ರವಿವಾರ ಹಾಗೂ ಸೋಮವಾರ ಮನೆಯಲ್ಲೇ ಕೊರೊನಾ ಲಸಿಕೆ ತಯಾರಿಸೋದು ಹೇಗೆ ಎಂದು ಹೆಚ್ಚಾಗಿ ಸರ್ಚ್​ ಮಾಡಿದ್ದಾರಂತೆ.

ಅಂದಹಾಗೆ ಈ ಪ್ರಶ್ನೆಗೆ ಉತ್ತರ ನೀವು ಮನೆಯಲ್ಲಿ ಕೊರೊನಾ ಲಸಿಕೆ ತಯಾರು ಮಾಡೋಕೆ ಸಾಧ್ಯಾನೇ ಇಲ್ಲ. ಕೊರೊನಾ ವಿರುದ್ಧ ಪಣ ತೊಟ್ಟಿರುವ ಕೇಂದ್ರ ಸರ್ಕಾರ ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೋ ವ್ಯಾಕ್ಸಿನ್​ ಎಂಬ ಎರಡು ಲಸಿಕೆಗಳ ಬಳಕೆಗೆ ತುರ್ತು ಅನುಮೋದನೆ ನೀಡಿದೆ.

ಈ ಎರಡೂ ಲಸಿಕೆಗಳು ಎರಡು ಡೋಸ್​ಗಳ ಮೂಲಕ ಸ್ವೀಕರಿಸಬೇಕು. ಹಾಗೂ ಎರಡು ಡೋಸ್​ಗಳ ನಡುವಿನ ಅಂತರ ಕನಿಷ್ಟ 28 ದಿನ ಇರಬೇಕೆಂದು ವೈದ್ಯರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...