alex Certify ಪಶ್ಚಿಮ ಘಟ್ಟಗಳಲ್ಲಿ ಹೊಸ ತಳಿಯ ಅಪರೂಪದ ಚಿಟ್ಟೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಶ್ಚಿಮ ಘಟ್ಟಗಳಲ್ಲಿ ಹೊಸ ತಳಿಯ ಅಪರೂಪದ ಚಿಟ್ಟೆ ಪತ್ತೆ

Indian Researchers Have Found a New Species of Butterfly in Western Ghats

ಪಶ್ಚಿಮ ಘಟ್ಟಗಳು ಭೂಮಿ ಮೇಲಿರುವ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿವೆ. ಇದುವರೆಗೂ ಇಲ್ಲಿ ಹೊಸ ಹೊಸ ಬಗೆಯ ಪ್ರಾಣಿ/ಸಸ್ಯಗಳು ಇರುವುದು ಪತ್ತೆಯಾಗುತ್ತಲೇ ಬಂದಿದ್ದು, ಮಾನವನ ಅಧ್ಯಯನಕ್ಕೆ ನಿಲುಕದ ಜೀವಸಿರಿಗೆ ತಾಣವಾಗಿವೆ ಈ ಘಟ್ಟಗಳು.

ಇದೀಗ ಸಂಶೋಧಕರು ಘಟ್ಟ ಶ್ರೇಣಿಯ ಅಗಸ್ತ್ಯಮಲೈನಲ್ಲಿ ’ಸಿಂಹಳ ರಾಮಸ್ವಾಮಿ ಸದಾಸಿವನ್ 2021’ ಹಸರಿನ ಹೊಸ ತಳಿಯ ಚಿಟ್ಟೆಯೊಂದನ್ನು ಪತ್ತೆ ಮಾಡಿದ್ದಾರೆ. ಲೈಸೇನಿಡ್‌ ಚಿಟ್ಟೆಯಾದ ಈ ಜೀವಿಯು ನಕಾಡುಬಾ ಸಂತತಿಗೆ ಸೇರಿದ ಚಿಟ್ಟೆಯಾಗಿದೆ ಎನ್ನಲಾಗಿದೆ.

ʼದಿ ಹಿಂದೂʼ ಪತ್ರಿಕೆಯಲ್ಲಿ ವರದಿಯಾದಂತೆ, ಇದೇ ಮೊದಲ ಬಾರಿಗೆ ಭಾರತೀಯರೇ ಇರುವ ಸಂಶೋಧನಾ ತಂಡವೊಂದು ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಯ ತಳಿ ಪತ್ತೆ ಮಾಡಿದೆ. ಈ ಅನ್ವೇಷಣೆಯು ’ಥ್ರೆಟನ್ಡ್‌ ಟ್ಯಾಕ್ಸಾ’ ಎಂಬ ಜೀವಸಂಕುಲ ಸಂರಕ್ಷಣೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದ ನಿಯತಕಾಲಿಕೆಯಲ್ಲಿ ಪ್ರಕಟಗೊಂಡಿದೆ.

ಟ್ರವಾಂಕೋರ್‌ ನ್ಯಾಚುರಲ್ ಸೊಸೈಟಿಯ ಡಾ. ಕಲೇಶ್‌ ಸದಾಶಿವನ್ ಹಾಗೂ ಬೈಜು ಕೆ, ಥೇಣಿಯ ರಾಮಸ್ವಾಮಿ ನಾಯ್ಕರ್‌ ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ರಾಹುಲ್ ಖೋಟ್‌ ಈ ಅಧ್ಯಯನ ಮಾಡಿದ್ದಾರೆ.

ಈ ತಳಿಯ ಚಿಟ್ಟೆಗಳು ಭಾರತ, ಶ್ರೀಲಂಕಾ ಹಾಗೂ ಆಗ್ನೇಯ ಏಷ್ಯಾದ ಅಗಲಕ್ಕೂ, ಆಸ್ಟ್ರೇಲಿಯಾ ಹಾಗೂ ಸಿಮೋನಾದ ಕೆಲ ಭಾಗಗಳಲ್ಲಿ ಕಂಡುಬರುತ್ತವೆ ಎನ್ನಲಾಗಿದೆ. ಭಾರತ ಹಾಗೂ ಶ್ರೀಲಂಕಾಗಳ ನಡುವೆ ಪೌರಾಣಿಕ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು ಚಿಟ್ಟೆಗೆ ಶ್ರೀರಾಮನ ಹೆಸರಿಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...