alex Certify ಲಡಾಖ್​ ಗಡಿಯಲ್ಲಿರುವ ಭಾರತೀಯ ಯೋಧರಿಗೆ ಮೊದಲ ಹಂತದಲ್ಲೇ ಕೊರೊನಾ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಡಾಖ್​ ಗಡಿಯಲ್ಲಿರುವ ಭಾರತೀಯ ಯೋಧರಿಗೆ ಮೊದಲ ಹಂತದಲ್ಲೇ ಕೊರೊನಾ ಲಸಿಕೆ

ಲಡಾಖ್​ ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ಮೊದಲ ಹಂತದ ಕೊರೊನಾ ಲಸಿಕೆಯನ್ನ ಪಡೆಯಲಿದ್ದಾರೆ. ದೇಶದಲ್ಲಿ ಇಂದು ಆರಂಭವಾಗಿರುವ ಕೊರೊನಾ ಲಸಿಕೆ ಹಂಚಿಕೆ ಪ್ರಕ್ರಿಯೆಯ ವೇಳೆ ಈ ಸಿಬ್ಬಂದಿಯನ್ನ ಮೊದಲ ಆದ್ಯತೆಯ ಗುಂಪಿಗೆ ಸೇರಿಸಿ ಲಸಿಕೆ ನೀಡಲಾಗ್ತಿದೆ.

ಲಡಾಖ್​ ಗಡಿಗೆ 12 ಸಾವಿರಕ್ಕೂ ಹೆಚ್ಚು ಕೊರೊನಾ ಲಸಿಕೆಗಳನ್ನ ಕಳುಹಿಸಿಕೊಡಲಾಗಿದೆ. ಭಾರತ ಹಾಗೂ ಚೀನಾ ನಡುವೆ ಗಡಿ ಉದ್ವಿಗ್ನತೆ ಶುರುವಾದಾಗಿನಿಂದ ಈ ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ದೇಶದ ಗಡಿಯನ್ನ ಕಾಯುತ್ತಿದ್ದಾರೆ. ಹೀಗಾಗಿ ಭಾರತೀಯ ಯೋಧರು ಸೇರಿದಂತೆ 4000 ಮಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತೆ.

ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಹಂಚಿಕೆಯಲ್ಲಿ ಮೊದಲ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಶನಿವಾರ 3 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದೆ. ಮೊದಲ ಹಂತದ ಕೊರೊನಾ ಲಸಿಕೆಯ ಪಟ್ಟಿಯಲ್ಲಿ ದೇಶದ 30 ಮಿಲಿಯನ್​ ಮಂದಿ ಮುಂಚೂಣಿ ನೌಕರರು ಇದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...