alex Certify ಮುಂದಿನ ವರ್ಷದಿಂದ ಭಾರತದಲ್ಲೇ ತಯಾರಾಗಲಿದೆ ಸ್ಪುಟ್ನಿಕ್​ ವಿ ಲಸಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದಿನ ವರ್ಷದಿಂದ ಭಾರತದಲ್ಲೇ ತಯಾರಾಗಲಿದೆ ಸ್ಪುಟ್ನಿಕ್​ ವಿ ಲಸಿಕೆ…!

ಮುಂದಿನ ವರ್ಷದಲ್ಲಿ ಭಾರತ 300 ಮಿಲಿಯನ್​ ಡೋಸ್​ ಸ್ಪುಟ್ನಿಕ್​ ವಿ ಲಸಿಕೆಗಳನ್ನ ಉತ್ಪಾದಿಸಲಿದೆ ಎಂದು ರಷ್ಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ಹೇಳಲಾಗಿದ್ದ ಸಂಖ್ಯೆಯ ಮೂರು ಪಟ್ಟು ಹೆಚ್ಚು ಉತ್ಪಾದಕ ಪಟ್ಟಿಯೊಂದಿಗೆ ಲಸಿಕೆ ತಯಾರಿಕೆಯ ಒಪ್ಪಂದವನ್ನ ಮಾಡಿಕೊಳ್ಳಲಾಗಿದೆ.

ಭಾರತದಲ್ಲಿ ಉತ್ಪಾದನೆ ಮಾಡಲಾದ ಸ್ಪುಟ್ನಿಕ್​ ವಿ ಲಸಿಕೆ ಮೊದಲ ಮಾದರಿಗಳನ್ನ ರಷ್ಯಾ ಈಗಾಗಲೇ ಪರೀಕ್ಷೆ ಮಾಡುತ್ತಿದೆ ಎಂದು ದೆಹಲಿ ರಾಯಭಾರ ಕಚೇರಿ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದೆ. ಭಾರತದಲ್ಲಿ ನಾವು ನಾಲ್ಕು ದೊಡ್ಡ ಲಸಿಕೆ ತಯಾರಕರೊಂದಿಗೆ ಒಪ್ಪಂದ ಹೊಂದಿದ್ದೇವೆ ಅಂತಾ ರಷ್ಯಾ ನೇರ ಹೂಡಿಕೆ ನಿಧಿ ಮುಖ್ಯಸ್ಥ ಡಿಮಿಟ್ರಿವ್​​ ರೊಸ್ಸಿಯಾ ಹೇಳಿದ್ದಾರೆ.

ಈ ಒಪ್ಪಂದದ ಪ್ರಕಾರ ಭಾರತವು ಮುಂದಿನ ವರ್ಷದಿಂದ ಸರಿ ಸುಮಾರು 300 ಮಿಲಿಯನ್​ ಅಥವಾ ಅದಕ್ಕೂ ಹೆಚ್ಚು ಲಸಿಕೆಗಳನ್ನ ಉತ್ಪಾದನೆ ಮಾಡಲಿದೆ.
ಭಾರತವು ವಿಶ್ವದ ಅತಿ ದೊಡ್ಡ ಲಸಿಕೆ ತಯಾರಕ ದೇಶವಾಗಿದೆ. ಇದೀಗ ಸ್ಪುಟ್ನಿಕ್​ ವಿ ಲಸಿಕೆ ತಯಾರಿಗೆ ಒಪ್ಪಂದದ ಮೂಲಕ ಭಾರತದಲ್ಲಿ ಉದ್ಯಮ ಸಾಮರ್ಥ್ಯ ಹೆಚ್ಚಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...