ಮುಂದಿನ ವರ್ಷದಲ್ಲಿ ಭಾರತ 300 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆಗಳನ್ನ ಉತ್ಪಾದಿಸಲಿದೆ ಎಂದು ರಷ್ಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಹಿಂದೆ ಹೇಳಲಾಗಿದ್ದ ಸಂಖ್ಯೆಯ ಮೂರು ಪಟ್ಟು ಹೆಚ್ಚು ಉತ್ಪಾದಕ ಪಟ್ಟಿಯೊಂದಿಗೆ ಲಸಿಕೆ ತಯಾರಿಕೆಯ ಒಪ್ಪಂದವನ್ನ ಮಾಡಿಕೊಳ್ಳಲಾಗಿದೆ.
ಭಾರತದಲ್ಲಿ ಉತ್ಪಾದನೆ ಮಾಡಲಾದ ಸ್ಪುಟ್ನಿಕ್ ವಿ ಲಸಿಕೆ ಮೊದಲ ಮಾದರಿಗಳನ್ನ ರಷ್ಯಾ ಈಗಾಗಲೇ ಪರೀಕ್ಷೆ ಮಾಡುತ್ತಿದೆ ಎಂದು ದೆಹಲಿ ರಾಯಭಾರ ಕಚೇರಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಭಾರತದಲ್ಲಿ ನಾವು ನಾಲ್ಕು ದೊಡ್ಡ ಲಸಿಕೆ ತಯಾರಕರೊಂದಿಗೆ ಒಪ್ಪಂದ ಹೊಂದಿದ್ದೇವೆ ಅಂತಾ ರಷ್ಯಾ ನೇರ ಹೂಡಿಕೆ ನಿಧಿ ಮುಖ್ಯಸ್ಥ ಡಿಮಿಟ್ರಿವ್ ರೊಸ್ಸಿಯಾ ಹೇಳಿದ್ದಾರೆ.
ಈ ಒಪ್ಪಂದದ ಪ್ರಕಾರ ಭಾರತವು ಮುಂದಿನ ವರ್ಷದಿಂದ ಸರಿ ಸುಮಾರು 300 ಮಿಲಿಯನ್ ಅಥವಾ ಅದಕ್ಕೂ ಹೆಚ್ಚು ಲಸಿಕೆಗಳನ್ನ ಉತ್ಪಾದನೆ ಮಾಡಲಿದೆ.
ಭಾರತವು ವಿಶ್ವದ ಅತಿ ದೊಡ್ಡ ಲಸಿಕೆ ತಯಾರಕ ದೇಶವಾಗಿದೆ. ಇದೀಗ ಸ್ಪುಟ್ನಿಕ್ ವಿ ಲಸಿಕೆ ತಯಾರಿಗೆ ಒಪ್ಪಂದದ ಮೂಲಕ ಭಾರತದಲ್ಲಿ ಉದ್ಯಮ ಸಾಮರ್ಥ್ಯ ಹೆಚ್ಚಲಿದೆ.