alex Certify ಬಿಗ್​ ನ್ಯೂಸ್​: ಭಾರತದಲ್ಲಿ 1 ಕೋಟಿ ಗಡಿಯತ್ತ ಕೊರೊನಾ ಸೋಂಕಿತರ ಸಂಖ್ಯೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್​ ನ್ಯೂಸ್​: ಭಾರತದಲ್ಲಿ 1 ಕೋಟಿ ಗಡಿಯತ್ತ ಕೊರೊನಾ ಸೋಂಕಿತರ ಸಂಖ್ಯೆ..!

ಗುರುವಾರ ಭಾರತದಲ್ಲಿ 24,010 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ಮೂಲಕ ಭಾರತದಲ್ಲಿ ಒಟ್ಟೂ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ ಗಡಿ ತಲುಪುವತ್ತ ದಾಪುಗಾಲು ಇಡ್ತಿದೆ. ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 99,56,558ರಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಗುರುವಾರ ಆಸ್ಪತ್ರೆಯಿಂದ 33,291 ಮಂದಿ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದು ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಗುಣಮುಖರ ಸಂಖ್ಯೆ 94,89,740ರಷ್ಟಾಗಿದೆ. ಭಾರತದಲ್ಲಿ ಪ್ರಸ್ತುತ ರಿಕವರಿ ರೇಟ್​ 95.31 ಶೇಕಡಾದಷ್ಟಿದೆ.

ದೇಶದಲ್ಲಿ ಸದ್ಯ 3,22,366 ಆಕ್ಟಿವ್​ ಕೋವಿಡ್​ ಕೇಸ್​ಗಳಿವೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 355 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಕೊರೊನಾ ಸಾವಿನ ಪ್ರಮಾಣ 1.45 ಪ್ರತಿಶತದಷ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...