alex Certify ಬಿಗ್‌ ನ್ಯೂಸ್: ದೇಶಿಯ ಉತ್ಪನ್ನಗಳ ಬಳಕೆಯತ್ತ ಮಹತ್ವದ ಹೆಜ್ಜೆಯಿಟ್ಟ ಸಿಎಪಿಎಫ್ ಕ್ಯಾಂಟೀನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ದೇಶಿಯ ಉತ್ಪನ್ನಗಳ ಬಳಕೆಯತ್ತ ಮಹತ್ವದ ಹೆಜ್ಜೆಯಿಟ್ಟ ಸಿಎಪಿಎಫ್ ಕ್ಯಾಂಟೀನ್

ಮೈಕ್ರೊವೇವ್ ಓವನ್‌ಗಳಿಂದ ಹಿಡಿದು ಪಾದರಕ್ಷೆಗಳವರೆಗಿನ 1000 ಕ್ಕೂ ಹೆಚ್ಚು ಆಮದು ಮಾಡಿದ ಉತ್ಪನ್ನಗಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕ್ಯಾಂಟೀನ್ ನಲ್ಲಿ ಇನ್ಮುಂದೆ ಲಭ್ಯವಿರುವುದಿಲ್ಲ. ಕ್ಯಾಂಟೀನ್‌ನಲ್ಲಿ ಸ್ಥಳೀಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇಂದಿನಿಂದಲೇ ಇದು ಜಾರಿಗೆ ಬಂದಿದೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕ್ಯಾಂಟೀನ್ ಗಳಲ್ಲಿ ಈಗ ಮೇಡ್ ಇನ್ ಇಂಡಿಯಾ ಸರಕುಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ. ಫೆರೆರೊ ರೋಶರ್, ರೆಡ್ ಬುಲ್, ವಿಕ್ಟೋರಿನೊಕ್ಸ್ ನಂತಹ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಏಳು ಕಂಪನಿಗಳನ್ನು ಡಿ-ಲಿಸ್ಟ್ ಮಾಡಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕ್ಯಾಂಟೀನ್ ಅನೇಕ ಕಂಪನಿಗಳ ಉತ್ಪನ್ನಗಳನ್ನು ತೆಗೆದುಕೊಳ್ಳಲು ನಿರಾಕರಿಸಿದೆ.

ಸಿಆರ್ಪಿಎಫ್, ಬಿಎಸ್ಎಫ್, ಐಟಿಬಿಪಿ, ಸಿಐಎಸ್ಎಫ್, ಎಸ್ಎಸ್ಬಿ, ಎನ್ಎಸ್ಜಿ ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 10 ಲಕ್ಷ ಸಿಬ್ಬಂದಿಯ ಸುಮಾರು 50 ಲಕ್ಷ ಕುಟುಂಬ ಸದಸ್ಯರು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕ್ಯಾಂಟೀನ್ ಬಳಸುತ್ತಾರೆ. ವರ್ಗ 1 ಮತ್ತು ವರ್ಗ 2 ರ ಅಡಿಯಲ್ಲಿ ಬರುವ ಸರಕುಗಳನ್ನು ಮಾತ್ರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕ್ಯಾಂಟೀನ್ ಇಡಲಾಗುತ್ತದೆ. 3 ನೇ ವರ್ಗಕ್ಕೆ ಸೇರುವ ಸರಕುಗಳನ್ನು ಜೂನ್ 1 ರಿಂದ ತೆಗೆದುಹಾಕಲಾಗುತ್ತದೆ. ಇಲ್ಲಿ ದಿನಸಿ, ಬಟ್ಟೆ, ಉಡುಗೊರೆ ವಸ್ತುಗಳು ಮತ್ತು ವಾಹನಗಳು ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...