alex Certify ಅಗಲಿದ ಮಡದಿಯ ಲೈಫ್ ಸೈಜ್ ಪ್ರತಿಮೆ ನಿರ್ಮಿಸಿದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗಲಿದ ಮಡದಿಯ ಲೈಫ್ ಸೈಜ್ ಪ್ರತಿಮೆ ನಿರ್ಮಿಸಿದ ಪತಿ

ತಮಿಳುನಾಡಿನ ಮಧುರೈನ ಉದ್ಯಮಿ ಸೇತುರಾಮ್‌ ತಮ್ಮ ಪ್ರೀತಿಯ ಮಡದಿಯ ಸವಿನೆನಪಿನಲ್ಲಿ ಅವರ ತದ್ರೂಪು ಎನ್ನಬಹುದಾದ 6 ಅಡಿ ಉದ್ದದ ಪ್ರತಿಮೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ.

ಸೇತುರಾಮ್ ಪತ್ನಿ ಪಿಚ್ಚೈಮಣಿಯಮ್ಮಾಳ್‌ ಕಳೆದ ತಿಂಗಳು ಇಹಲೋಕ ತ್ಯಜಿಸಿದ್ದಾರೆ. ಅವರ ನೆನಪನ್ನು ಶಾಶ್ವತವಾಗಿಡಲು ಈ ಪ್ರತಿಮೆಯನ್ನು ಸೃಷ್ಟಿಸಲಾಗಿದೆ. ಫೈಬರ್‌, ರಬ್ಬರ್‌ ಹಾಗೂ ಹಲವಾರು ಬಣ್ಣಗಳನ್ನು ಬಳಸಿಕೊಂಡು ಈ ಪ್ರತಿಮೆ ನಿರ್ಮಿಸಲಾಗಿದೆ.

“ನನ್ನ ಮಡದಿ ನನಗೆ ಅತ್ಯಂತ ಪ್ರಿಯಳಾಗಿದ್ದಳು. ಅವಳು ಕಳೆದ ತಿಂಗಳು ನಮ್ಮನ್ನು ಬಿಟ್ಟು ಹೋಗಿದ್ದಾಳೆ. ನಮ್ಮ ಮನೆಯಲ್ಲಿ ಈ ಪ್ರತಿಮೆಯನ್ನು ಇರಿಸಿದ್ದು, ಆಕೆ ಸದಾ ನಮ್ಮೊಂದಿಗೆ ಇರಲಿದ್ದಾಳೆ” ಎಂದು ಸೇತುರಾಮ್‌ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...