alex Certify ಶಾಲಾ ಶುಲ್ಕ ಕಟ್ಟಲು ಹೂ ಮಾರುತ್ತಿರುವ ಮಕ್ಕಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲಾ ಶುಲ್ಕ ಕಟ್ಟಲು ಹೂ ಮಾರುತ್ತಿರುವ ಮಕ್ಕಳು….!

ಕೊರೊನಾ ವೈರಸ್ ಮಹಾಮಾರಿಯಿಂದ ಕೇವಲ ಲಕ್ಷಾಂತರ ಜನರ ಜೀವಗಳು ಬಲಿಯಾಗಿದ್ದು ಮಾತ್ರವಲ್ಲದೇ ಕೋಟ್ಯಂತರ ಜನರ ಜೀವನೋಪಾಯ ಸಹ ಬೀದಿಗೆ ಬಿದ್ದಿದೆ.

ಇವರುಗಳ ಪೈಕಿ ಅತ್ಯಂತ ಹೆಚ್ಚು ಪ್ರಭಾವಿತರಾದವರೆಂದರೆ, ದಿನಗೂಲಿ ನೌಕರರು. ಒಂದೆಡೆ ಇಟ್ಟಿರುವ ಸಣ್ಣ ಪುಟ್ಟ ಉಳಿತಾಯಗಳೆಲ್ಲಾ ಬರಿದಾಗಿ ಲಾಕ್‌ಡೌನ್ ಅವಧಿಯಲ್ಲಿ ಜೀವನ ನಡೆಸುವುದೇ ದುಸ್ತರವಾದ ಸಂದರ್ಭದಲ್ಲಿ ಆದಾಯದ ಮೂಲವೂ ಸಹ ಇಲ್ಲದೇ ಇರುವುದು ಅವರ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

ಇಂಥ ಒಂದು ನಿದರ್ಶನದಲ್ಲಿ, ದಿನಗೂಲಿ ನೌಕರನ ಆರು ವರ್ಷದ ಝೋಯಾ ಹೆಸರಿನ ಮಗಳು ಹಾಗೂ 7 ವರ್ಷದ ಮಗ ತನ್ವೀರ್‌ ಕೊಯಮತ್ತೂರಿನ ಮರುಧಮಲಯ ಪ್ರದೇಶದ ಬೀದಿಗಳಲ್ಲಿ ಹೂವುಗಳನ್ನು ಮಾರುತ್ತಾ ಇರುವ ಚಿತ್ರವೊಂದು ವೈರಲ್ ಆಗಿದೆ. ಈ ಇಬ್ಬರೂ ತಮ್ಮ ತಂದೆ ಶಬ್ಬೀರ್‌ಗೆ ಸಹಾಯ ಮಾಡುತ್ತಿದ್ದು, ತಮ್ಮ ಶಾಲೆಯ ಫೀಸ್ ಕಟ್ಟಲು ಬೇಕಾದ ಶುಲ್ಕ ಪಾವತಿ ಮಾಡಲು ಖುದ್ದು ತಾವೇ ಸಂಪಾದನೆ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...