alex Certify ಬಾಬಾ ರಾಮದೇವ್​ ಜೊತೆ ಬಹಿರಂಗ ಚರ್ಚೆಗೆ IMA ರೆಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಬಾ ರಾಮದೇವ್​ ಜೊತೆ ಬಹಿರಂಗ ಚರ್ಚೆಗೆ IMA ರೆಡಿ

ಯೋಗ ಗುರು ಬಾಬಾ ರಾಮದೇವ್​ ಹಾಗೂ ಭಾರತೀಯ ವೈದ್ಯಕೀಯ ಸಂಘದ ನಡುವಿನ ವಿವಾದ ದಿನಕ್ಕೊಂದು ಟ್ವಿಸ್ಟ್​ ಪಡೀತಾನೇ ಇದೆ. ಪತಂಜಲಿ ಔಷಧಿಗಳನ್ನ ಅಲೋಪಥಿ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬ ಬಾಬಾ ರಾಮದೇವ್​ರ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ವೈದ್ಯಕೀಯ ಸಂಘ ಈ ಕುರಿತು ಬಹಿರಂಗ ಚರ್ಚೆ ಆಹ್ವಾನ ನೀಡಿದೆ.

ಅಲೋಪಥಿ ಚಿಕಿತ್ಸೆಯ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಭಾರತೀಯ ವೈದ್ಯಕೀಯ ಸಂಘ ಈಗಾಗಲೇ ಈ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಾತ್ರವಲ್ಲದೇ ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿರುವ ಐಎಂಎ ಕೊರೊನಾ ಲಸಿಕೆ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿರುವ ಬಾಬಾ ರಾಮದೇವ್​ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಹೇಳಿತ್ತು.

ರಾಮದೇವ್​ ವಿರುದ್ಧ ಪ್ರಕರಣ ದಾಖಲಿಸಿರುವ ಐಎಂಎ ದೂರಿನ ಪ್ರತಿಯಲ್ಲಿ : ಕೋವಿಡ್​ ಪರಿಸ್ಥಿತಿಯ ಲಾಭವನ್ನ ಪಡೆಯಲು ಯತ್ನಿಸುತ್ತಿರುವ ಬಾಬಾ ರಾಮ್​ದೇವ್​ ಅಲೋಪಥಿ ಚಿಕಿತ್ಸಾ ವಿಧಾನದ ಬಗ್ಗೆ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ದೂರಿತ್ತು.

ಐಎಂಎ ನೀಡಿರುವ ದೂರನ್ನ ಸ್ವೀಕರಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...