alex Certify ತಮಿಳರ ಪ್ರಸಿದ್ಧ ಅಡುಗೆ ಕಾರ್ಯಕ್ರಮದಲ್ಲಿ ಭಾಗಿಯಾದ ರಾಹುಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳರ ಪ್ರಸಿದ್ಧ ಅಡುಗೆ ಕಾರ್ಯಕ್ರಮದಲ್ಲಿ ಭಾಗಿಯಾದ ರಾಹುಲ್​

ತಮಿಳುನಾಡಿನ ಪ್ರಸಿದ್ಧ ಯು ಟ್ಯೂಬ್​​ ಚಾನೆಲ್​​ ವಿಲೇಜ್​ ಕುಕ್ಕಿಂಗ್​, ಕಾಡು ಮೇಡುಗಳಲ್ಲಿ ಅಡುಗೆ ಮಾಡಿ ತೋರಿಸುವ ಮೂಲಕವೇ ಅಪಾರ ಅಭಿಮಾನಿ ಬಳಗವನ್ನ ಸಂಪಾದಿಸಿದೆ. ಈ ಬಾರಿ ಈ ಚಾನೆಲ್​ನ ವಿಶೇಷ ಅತಿಥಿಯಾಗಿ ಸಂಸದ ರಾಹುಲ್​ ಗಾಂಧಿ ಕಾಣಿಸಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗಿದೆ.

ವಿಧಾನಸಭಾ ಚುನಾವಣೆಗೆ ಇನ್ನೇನು ತಿಂಗಳುಗಳು ಬಾಕಿ ಇರುವಾಗಲೇ ಈ ವಿಡಿಯೋ ಸಖತ್​ ಸೌಂಡ್​ ಮಾಡ್ತಿದೆ.

ಶುಕ್ರವಾರ ಈ ವಿಡಿಯೋವನ್ನ ಯುಟ್ಯೂಬ್​ನಲ್ಲಿಪೋಸ್ಟ್ ಮಾಡಲಾಗಿದೆ. ನೀಲಿ ಬಣ್ಣದ ಟೀ ಶರ್ಟ್​ನಲ್ಲಿ ರಾಹುಲ್​ ಗಾಂಧಿ ಕಾಣಿಸಿಕೊಂಡಿದ್ದಾರೆ. ಅಡುಗೆ ಮಾಡುವ ಮಧ್ಯದಲ್ಲಿ ರಾಹುಲ್​ ಗಾಂಧಿ ತಮಿಳು ಮಾತನಾಡೋದನ್ನ ನೀವು ಕಾಣಬಹುದಾಗಿದೆ.

ಕಲ್ಲುಪ್ಪು, ಥಾಯಿರ್, ನಲ್ಲ ಇರುಕು ಹೀಗೆ ಸಾಕಷ್ಟು ತಮಿಳು ಭಾಷೆಯನ್ನ ರಾಹುಲ್​ ಬಳಕೆ ಮಾಡಿದ್ದಾರೆ. ವಿಲೇಜ್​​ ಕುಕ್ಕಿಂಗ್​ ಚಾನೆಲ್​ ಸದಸ್ಯರು ತಯಾರಿಸಿದ ಮಶ್ರೂಮ್​ ಬಿರಿಯಾನಿಯನ್ನ ಹುಲ್ಲು ಹಾಸಿನ ಮೇಲೆ ಕುಳಿತು ಸವಿದಿದ್ದಾರೆ.

ವಿಶೇಷ ಅಂದ್ರೆ ಈ ಬಿರಿಯಾನಿಗೆ ರಾಯತ ತಯಾರು ಮಾಡಿದ್ದು ಸ್ವತಃ ರಾಹುಲ್​ ಗಾಂಧಿ. ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸಹ ಇದ್ದಾರೆ.

— Tamil Nadu Congress Committee (@INCTamilNadu) January 29, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...