alex Certify ಕರೋನಾ ಸೋಂಕು ಪೀಡಿತ ಮಹಿಳಾ ಪೊಲೀಸ್ ಆಂಬುಲೆನ್ಸ್ ಏರುವ ಮುನ್ನ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೋನಾ ಸೋಂಕು ಪೀಡಿತ ಮಹಿಳಾ ಪೊಲೀಸ್ ಆಂಬುಲೆನ್ಸ್ ಏರುವ ಮುನ್ನ ಹೇಳಿದ್ದೇನು ಗೊತ್ತಾ…?

ಮುಂಬೈ: ನಿಜವಾದ ವೃತ್ತಿ ಪ್ರೇಮ ಎಂದರೇನು ಎಂದು ಮುಂಬೈನ ಕರೋನಾ ಸೋಂಕಿತ ಪೊಲೀಸ್ ಒಬ್ಬರು ತೋರಿಸಿದ್ದಾರೆ.

29 ವರ್ಷದ ಮುಂಬೈ ಮಹಿಳಾ ಪೊಲೀಸ್ ಒಬ್ಬರು ಕರೋನಾ ಸೊಂಕಿತರಾಗಿದ್ದು, ಅವರನ್ನು ಆಂಬುಲೆನ್ಸ್ ಅಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮುಂಚೆ
“ಚಿಂತಿಸಿಬೇಡಿ ಫ್ರೆಂಡ್ಸ್, ಕೆಲಸಕ್ಕೆ ಬೇಗ ವಾಪಸ್ ಬರುತ್ತೇನೆ” ಎಂದು ಅವರ ಸಹೋದ್ಯೋಗಿಗಳನ್ನು ಹುರಿದುಂಬಿಸಿ ಹೋಗುವ ವಿಡಿಯೋವನ್ನ ಮುಂಬೈ ಪೊಲೀಸರು ಟ್ವಿಟರ್ ಖಾತೆಯಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. ನೋಡುಗರು ಪೊಲೀಸ್ ಅಧಿಕಾರಿಗೆ ತಮ್ಮ ಅಭಿನಂದನೆ ಸಲ್ಲಿಸಿದ್ದಾರೆ‌.

ಕಳೆದ ವಾರ ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯದ ನಂತರ ರಸ್ತೆಯಲ್ಲಿ ಮಲಗಿದ್ದ ಫೋಟೋವನ್ನು ಅರುಣಾಚಲ ಪ್ರದೇಶದ ಡಿಐಜಿ ಮಧುರ್ ವರ್ಮಾ ” ಮೆತ್ತನೆಯ ಹಾಸಿಗೆ, 8 ತಾಸಿನ ನಿದ್ರೆ ಪೊಲೀಸರಿಗೆ ಅಲ್ಲ. ನಮ್ಮ ಅಧಿಕಾರಿಗಳು ನಮ್ಮ ಹೆಮ್ಮೆ” ಎಂಬ ಅಡಿಬರಹದೊಂದಿಗೆ ಶೇರ್ ಮಾಡಿದ್ದರು. ಅದು ನೋಡುಗರ ಪ್ರಶಂಸೆಗೆ ಪಾತ್ರವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...