alex Certify ಡ್ರಗ್ಸ್ ದಂಧೆಗಿಳಿದ ಡ್ಯಾನ್ಸ್ ಶಿಕ್ಷಕನ ಬಂಧಿಸಿದ ನಾಗ್ಪುರ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ದಂಧೆಗಿಳಿದ ಡ್ಯಾನ್ಸ್ ಶಿಕ್ಷಕನ ಬಂಧಿಸಿದ ನಾಗ್ಪುರ ಪೊಲೀಸರು

Hyderabad dance teacher turns drug peddler, arrested in Nagpur - India Newsಕೋವಿಡ್-19 ಕಾರಣದಿಂದ ಕೆಲಸ ಕಳೆದುಕೊಂಡು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗಿದ್ದ ಹೈದರಾಬಾದ್‌ನ ಡ್ಯಾನ್ಸ್ ಶಿಕ್ಷಕರೊಬ್ಬರನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ ನಿವಾಸಿ, 27 ವರ್ಷ ವಯಸ್ಸಿನ ಶಿವಶಂಕರ್‌ ಇಸಾಂಪಲ್ ಎಂಬಾತನನ್ನು ನಾಗ್ಪುರದ ಬೆಲ್ತರೋಡಿ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ. ದೆಹಲಿಯಲ್ಲಿರುವ ವ್ಯಕ್ತಿಯೊಬ್ಬರಿಗೆ 91 ಕೆಜಿಯಷ್ಟು ಮಾರಿಯಾನಾವನ್ನು ತಲುಪಿಸಲು ನೋಡುತ್ತಿದ್ದ ವೇಳೆ ಈ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.

ದೊಡ್ಡ ಪ್ಯಾಕೇಜ್ ಒಂದನ್ನು ತನ್ನೊಂದಿಗೆ ಕೊಂಡೊಯ್ಯುತ್ತಿದ್ದ ವೇಳೆ ವಾರ್ಧಾ ರಸ್ತೆಯ ಬಳಿ ಪೊಲೀಸರು ಅಡ್ಡಗಟ್ಟಿದ ಕೂಡಲೇ ಅಲ್ಲಿಂದ ಓಡಿ ಹೋಗಲು ಯತ್ನಿಸಿದ ಇಸಾಂಪಲ್‌ನನ್ನು ಚೇಸ್ ಮಾಡಿ ಬಂಧಿಸಲಾಗಿದೆ.

ಆಂಧ್ರ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆದು ಸಾಗಾಟ ಮಾಡಲಾಗುತ್ತಿದ್ದ 91 ಕೆಜಿ ಮಾರಿಯಾನಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಸಾಂಪಾಲ್‌ನನ್ನು ಕೋರ್ಟ್‌ಗೆ ಹಾಜರು ಪಡಿಸಿದ ಪೊಲೀಸರು ಮಾರ್ಚ್ 18ರವರೆಗೂ ಆತನ ಕಸ್ಟಡಿ ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...