alex Certify ಆಂಬುಲೆನ್ಸ್​ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್​ ಕ್ಲಿಯರ್​ ಮಾಡಿದ ಪೇದೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಬುಲೆನ್ಸ್​ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್​ ಕ್ಲಿಯರ್​ ಮಾಡಿದ ಪೇದೆ..!

ಆಂಬುಲೆನ್ಸ್​ಗೆ ದಾರಿ ಮಾಡಿಕೊಡುವ ಸಲುವಾಗಿ ಸಂಚಾರಿ ಠಾಣೆ ಕಾನ್ಸ್​​ಟೇಬಲ್​ ಒಬ್ಬರು 2 ಕಿಲೋಮೀಟರ್​​ವರೆಗೆ ಓಡಿ ಟ್ರಾಫಿಕ್​ ಕ್ಲಿಯರ್​ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಹೈದರಾಬಾದ್ನ​ನ ಅಬಿಡ್ಸ್​​ ಜಿಪಿಒ ಜಂಕ್ಷನ್​ ಬಳಿ ಈ ಘಟನೆ ನಡೆದಿದೆ. ಪೊಲೀಸ್​ ಪೇದೆ ಜಿ. ಬಾಬ್ಜಿ ಎಂಬವರು ಆಂಬುಲೆನ್ಸ್​ನಲ್ಲಿದ್ದ ರೋಗಿಯ ಪ್ರಾಣ ಉಳಿಸುವುದಕ್ಕಾಗಿ 2 ಕಿಲೋಮೀಟರ್​ವರೆಗೆ ಓಡಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಿದ್ದಾರೆ.

ಈ ಘಟನೆ ಸೋಮವಾರ ನಡೆದಿದ್ದು ಪೊಲೀಸರು ಈ ವಿಡಿಯೋವನ್ನ ಬುಧವಾರ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಳಿಕ ವಿಚಾರ ವೈರಲ್​ ಆಗಿದೆ. ಅಂದಹಾಗೆ ಈ ಪೊಲೀಸ್​ ಪೇದೆ ಆಂಬುಲೆನ್ಸ್​ಗೆ ದಾರಿ ಮಾಡಿಕೊಡುವುದಕ್ಕಾಗಿ ತನ್ನ ಠಾಣಾ ವ್ಯಾಪ್ತಿಯನ್ನ ಮೀರಿ ಸಂಚಾರ ದಟ್ಟಣೆ ನಿಯಂತ್ರಿಸಿದ್ದಾರಂತೆ.

ಈ ವಿಚಾರವಾಗಿ ಮಾತನಾಡಿದ ಬಾಬ್ಜಿ, ನನಗೆ ಆಂಬುಲೆನ್ಸ್​ನಲ್ಲಿ ಇದ್ದ ರೋಗಿಯ ಪರಿಚಯವಿರಲಿಲ್ಲ. ಆದರೂ ಒಂದು ಜೀವ ಕಾಪಾಡಬೇಕು ಅಂತಾ ಈ ಪ್ರಯತ್ನ ಮಾಡಿದೆ ಅಂತಾ ಹೇಳಿದ್ದಾರೆ.

— Anil Kumar IPS (@AddlCPTrHyd) November 4, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...