ಅಂತರ್ಜಾಲ ಆಧಾರಿತ ವೈವಾಹಿಕ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಹೈದರಾಬಾದ್ ನಲ್ಲಿ ಟೆಕ್ಕಿಯೊಬ್ಬರು ವಂಚನೆಗೊಳಗಾಗಿ ಒಂದು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಮಹಿಳೆ ಹಾಗೂ ಆಕೆಯ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ವಾರದ ಹಿಂದಷ್ಟೇ ಅಮೆರಿಕಾ ಮೂಲದ ಎನ್ ಆರ್ ಐ ಮ್ಯಾಟ್ರಿಮೋನಿ ವಂಚನೆಗೆ ಸಿಲುಕಿ 65 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ 44 ವರ್ಷದ ಮಾಳವಿಕ ದೇವತಿ ಅವರನ್ನು ಬಂಧಿಸಲಾಗಿತ್ತು. ಇದೀಗ ಈಕೆಯಿಂದ ವಂಚನೆಗೊಳಗಾದ ಟಿಕ್ಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಂಚಕಿಯ ಲವ್ ಚಾಟ್ ಗೆ ಮೋಸ ಹೋದ 33 ವರ್ಷದ ಟೆಕ್ಕಿ, ತನ್ನ ಉಳಿತಾಯ ಖಾತೆಯಲ್ಲಿ ಇದ್ದ ಹಣವನ್ನೆಲ್ಲ ಆಕೆಗೆ ಕಳಿಸಿಕೊಟ್ಟಿದ್ದಾನೆ. ಈ ಪ್ರಕರಣದಲ್ಲಿ ವಂಚಕಿಯ 22 ವರ್ಷದ ಮಗನನ್ನು ಜುಬಿಲಿ ಹಿಲ್ ಪೊಲೀಸರು ಬಂಧಿಸಿದ್ದಾರೆ. ಆಕೆ ಅನುಪಲ್ಲವಿ ಎಂಬ ನಕಲಿ ಪ್ರೊಫೈಲ್ ಸೃಷ್ಟಿಸಿ ವೈವಾಹಿಕ ವೆಬ್ ಸೈಟ್ ನಲ್ಲಿ ಪರಿಚಯಿಸಿಕೊಂಡಿದ್ದಳು.