alex Certify ಪತ್ನಿ ಕಣ್ಣಿಗೆ ಬಿದ್ದ ಪ್ರೇಯಸಿ ಜೊತೆ ಈ ಕೆಲಸ ಮಾಡ್ತಿದ್ದ ಇಂಜಿನಿಯರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಕಣ್ಣಿಗೆ ಬಿದ್ದ ಪ್ರೇಯಸಿ ಜೊತೆ ಈ ಕೆಲಸ ಮಾಡ್ತಿದ್ದ ಇಂಜಿನಿಯರ್

ಉತ್ತರ ಪ್ರದೇಶದ ಬಾಂಡಾದಲ್ಲಿ ದಂಪತಿ ಗಲಾಟೆ ಬೀದಿಗೆ ಬಿದ್ದಿದೆ. ಪ್ರೇಯಸಿ ಜೊತೆ ದೋಸೆ ತಿನ್ನಲು ಹೋಗಿದ್ದು ಜ್ಯೂನಿಯರ್ ಇಂಜಿನಿಯರ್ ಗೆ ದುಬಾರಿಯಾಗಿ ಪರಿಣಮಿಸಿದೆ. ಜ್ಯೂನಿಯರ್ ಇಂಜಿನಿಯರ್ ಪತಿ ಬಣ್ಣವನ್ನು ಪತ್ನಿ ಬಯಲು ಮಾಡಿದ್ದಾಳೆ.

ಪತ್ನಿಗೆ ಮೋಸ ಮಾಡ್ತಿದ್ದ ಇಂಜಿನಿಯರ್, ಪ್ರೇಯಸಿ ಜೊತೆ ದೋಸೆ ತಿನ್ನುವ ಪ್ಲಾನ್ ಹಾಕಿದ್ದ. ಕಾರಿನಲ್ಲಿಯೇ ಕುಳಿತು ಬಿಸಿ ಬಿಸಿ ದೋಸೆ ತಿನ್ನಲು ಮುಂದಾಗಿದ್ದರು. ಇಂಜಿನಿಯರ್ ದೋಸೆ ತಂದು ಪ್ರೇಯಸಿಗೆ ನೀಡ್ಬೇಕು ಅಷ್ಟರಲ್ಲಿ ಪತ್ನಿಯ ಎಂಟ್ರಿಯಾಗಿದೆ. ಪತ್ನಿ ತನ್ನ ಸಹೋದರನ ಜೊತೆ ಬಂದು ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಇಬ್ಬರ ಜಗಳ ತಾರಕಕ್ಕೇರಿದೆ. ಇದಾದ ನಂತ್ರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪತಿ ಚಟ ಪತ್ನಿಗೆ ಚೆನ್ನಾಗಿ ತಿಳಿದಿತ್ತಂತೆ. ಅನೇಕ ಹುಡುಗಿಯರ ಜೊತೆ ಸಂಬಂಧವಿಟ್ಟುಕೊಂಡಿದ್ದ ಇಂಜಿನಿಯರ್ ಪತಿ ಆಗಾಗ ಒಬ್ಬೊಬ್ಬ ಹುಡುಗಿ ಜೊತೆ ತಿರುಗುತ್ತಿದ್ದನಂತೆ. ಅನೇಕ ಬಾರಿ ಇಬ್ಬರ ಮಧ್ಯೆ ಇದೇ ವಿಷ್ಯಕ್ಕೆ ಗಲಾಟೆ ನಡೆದಿತ್ತಂತೆ.‌ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದಳಂತೆ. ಆದ್ರೆ ದೂರು ದಾಖಲಿಸಿಕೊಳ್ಳದ ಪೊಲೀಸರು ಇಂಜಿನಿಯರನ್ನು ಬಿಟ್ಟು ಕಳುಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...