alex Certify ಹಾಡಹಗಲೇ ತುಂಬು ಗರ್ಭಿಣಿ ಪತ್ನಿಗೆ ಗುಂಡು ಹಾರಿಸಿ ಕೊಂದ ಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ತುಂಬು ಗರ್ಭಿಣಿ ಪತ್ನಿಗೆ ಗುಂಡು ಹಾರಿಸಿ ಕೊಂದ ಪತಿ….!

29 ವರ್ಷದ ತುಂಬು ಗರ್ಭಿಣಿಯನ್ನ ಪತಿ ಕೊಲೆ ಮಾಡಿದ ದಾರುಣ ಘಟನೆ ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ 34 ವರ್ಷದ ಪತಿ ಮೊಹಮ್ಮದ್​ ವಾಸಿಮ್​​ ಬಂಧನವಾಗಿದೆ.

ಈತನ ವಿರುದ್ಧ ಗರ್ಭಿಣಿ ಪತ್ನಿ ಶೈನಾಳನ್ನ ಕೊಲೆ ಮಾಡಿದ್ದು ಮಾತ್ರವಲ್ಲದೇ ಆಕೆಯ ಸಹಾಯಕ್ಕೆ ಬಂದ ಶಹಾದತ್​ ಮೇಲೆ ಹಲ್ಲೆ ನಡೆಸಿದ ಆರೋಪವೂ ಇದೆ. ಶಹಾದತ್​ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಶೈನಾ ವಾಸಿಮ್​​ ಜೊತೆ ನಾಲ್ಕನೇ ವಿವಾಹವಾಗಿದ್ದಳು. ಈಕೆಯ ವಿರುದ್ಧ ಮಾದಕ ದ್ರವ್ಯ ಸಾಗಣೆ ಆರೋಪವಿದ್ದುದರಿಂದ ಪೊಲೀಸರು ಬಂಧಿಸಿದ್ದರು. ಈ ನಡುವೆ ವಾಸಿಮ್​​ ಶೈನಾಳ ಸಹೋದರಿ ರಿಹಾನಾಳ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದ. ಶೈನಾ ಗರ್ಭಿಣಿಯಾಗಿದ್ದ ಹಿನ್ನೆಲೆ ಜಾಮೀನಿನ ಮೂಲಕ ಬಿಡುಗಡೆ ಮಾಡಲಾಗಿತ್ತು.

ಜೈಲಿನಿಂದ ಹೊರಬಂದ ಶೈನಾಳನ್ನ ಸಂಪರ್ಕಿಸುವ ಯಾವುದೇ ಪ್ರಯತ್ನವನ್ನ ವಾಸೀಂ ಮಾಡಿರಲಿಲ್ಲ. ಇದರಿಂದ ಕೋಪಗೊಂಡ ಶೈನಾ ತನ್ನ ಮೂರನೇ ಪತಿ ಗ್ಯಾಂಗ್​ಸ್ಟರ್​ ಶರಾಫತ್​ನಿಂದ ನಿನಗೆ ಪಾಠ ಕಲಿಸುತ್ತೇನೆ ಎಂಧು ಧಮ್ಕಿ ಹಾಕಿದ್ದಳು. ಎರಡು ಪಿಸ್ತೂಲ್​ಗಳ ಜೊತೆ ಆಕೆಯ ಮನೆಗೆ ಬಂದ ವಾಸೀಂ ಎಲ್ಲರ ಎದುರಲ್ಲೇ ಶೈನಾಳ ಮೇಲೆ ಗುಂಡು ಹಾರಿಸಿದ್ದ.

ಶೈನಾಳ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಕೊಲೆಯ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಈತನ ಫೈರಿಂಗ್​ಗೆ ಶೈನಾ ಕೊಲೆಯಾಗಿದ್ದರೆ ಶಹಾದತ್​ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...