alex Certify BIG SHOCKING: ಆರ್​ಟಿಐ ಅರ್ಜಿಯಲ್ಲಿ ಬಯಲಾಯ್ತು ದೇಶದಲ್ಲಿ ವ್ಯರ್ಥವಾದ ಕೊರೊನಾ ಲಸಿಕೆ ಪ್ರಮಾಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ಆರ್​ಟಿಐ ಅರ್ಜಿಯಲ್ಲಿ ಬಯಲಾಯ್ತು ದೇಶದಲ್ಲಿ ವ್ಯರ್ಥವಾದ ಕೊರೊನಾ ಲಸಿಕೆ ಪ್ರಮಾಣ..!

ದೇಶದಲ್ಲಿ ಕೊರೊನಾ ಲಸಿಕೆಗಳ ಅಭಾವದ ಬಗ್ಗೆ ಹೆಚ್ಚು ವರದಿಯಾಗುತ್ತಿರುವ ಬೆನ್ನಲ್ಲೆ ಆರ್​ಟಿಐ ಅರ್ಜಿಯೊಂದು ಜನವರಿ ಮಧ್ಯಂತರದಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನದಿಂದ ಇಲ್ಲಿಯವರೆಗೆ ವ್ಯರ್ಥವಾದ ಕೊರೊನಾ ಲಸಿಕೆಗಳ ದತ್ತಾಂಶ ನೀಡಿದೆ.

ಆರ್​ಟಿಐ ಅರ್ಜಿಗೆ ನೀಡಲಾದ ಉತ್ತರದಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 12.10 ಪ್ರತಿಶತ ಲಸಿಕೆ ವ್ಯರ್ಥ ಮಾಡಲಾಗಿದೆ. ಎರಡನೇ ಸ್ಥಾನದಲ್ಲಿ 9.74 ಪ್ರತಿಶತ ಲಸಿಕೆ ವ್ಯರ್ಥ ಮಾಡುವ ಮೂಲಕ ಹರಿಯಾಣ ಇದೆ. ಇನ್ನು ಪಂಜಾಬ್​ (8.12%), ಮಣಿಪುರ (7.8%) ಹಾಗೂ ತೆಲಂಗಾಣ (7.55%) ಕ್ರಮವಾಗಿ ಮುಂದಿನ ಸ್ಥಾನಗಳನ್ನ ಪಡೆದುಕೊಂಡಿವೆ.

ಏಪ್ರಿಲ್​ 11ರವರೆಗೆ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ ದೇಶದಲ್ಲಿ 10 ಕೋಟಿ ಡೋಸ್​ಗಳನ್ನ ಬಳಕೆ ಮಾಡಲಾಗಿದ್ದು ಇದರಲ್ಲಿ 44 ಲಕ್ಷ ಡೋಸ್​ ವ್ಯರ್ಥವಾಗಿದೆ ಎಂದು ತಿಳಿದುಬಂದಿದೆ.

ಇನ್ನು ಕಡಿಮೆ ಪ್ರಮಾಣದಲ್ಲಿ ಲಸಿಕೆಯನ್ನ ವ್ಯರ್ಥ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೊರಾಂ, ಗೋವಾ, ದಿಯು & ದಮನ್, ಅಂಡಮಾನ್​ ಹಾಗೂ ನಿಕೋಬಾರ್​ ಮತ್ತು ಲಕ್ಷದ್ವೀಪಗಳು ಸ್ಥಾನ ಪಡೆದಿದೆ. ಈ ರಾಜ್ಯಗಳಲ್ಲಿ ಶೂನ್ಯ ಪ್ರತಿಶತ ಲಸಿಕೆ ವ್ಯರ್ಥವಾಗಿದೆ.

ಕೊರೊನಾ ಲಸಿಕೆ ಅಭಾವವು ವಿವಿಧ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಮಹಾರಾಷ್ಟ್ರ, ಪಂಜಾಬ್​, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳು ಜನಸಂಖ್ಯೆಗಿಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ಸಂಗ್ರಹವಿದೆ ಎಂದು ಹೇಳಿದ್ದವು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...