alex Certify ಗಡಿ ಕಾಯುವ ಯೋಧರಿಗೆಂದೇ ನಿರ್ಮಾಣವಾಗಿದೆ ಈ ಹೊಸ ಸೋಲಾರ್​ ಟೆಂಟ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿ ಕಾಯುವ ಯೋಧರಿಗೆಂದೇ ನಿರ್ಮಾಣವಾಗಿದೆ ಈ ಹೊಸ ಸೋಲಾರ್​ ಟೆಂಟ್..​..!

ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ಹವಾಮಾನ ವೈಪರಿತ್ಯದಿಂದಾಗುವ ಸಮಸ್ಯೆಗಳು ಒಂದೆರಡಲ್ಲ. ಈ ಸಮಸ್ಯೆಗೆ ಇಂಜಿನಿಯರ್​ ವಾಂಗ್​ಚಕ್​​ ಪರಿಹಾರವನ್ನ ಹುಡುಕಿದ್ದು ಪವರ್​ ಹೀಟೆಡ್​​ ಮಿಲಿಟರಿ ಟೆಂಟ್​ನ್ನು ಕಂಡು ಹಿಡಿದಿದ್ದಾರೆ. ಇದೊಂದು ಸೋಲಾರ್​ ಟೆಂಟ್​ ಆಗಿದ್ದು ಇದರೊಳಗೆ ವಾತಾವರಣವು ಸಮತೋಲನವಾಗಿ ಇರುತ್ತದೆ. ಅಲ್ಲದೇ ಈ ಟೆಂಟ್​​ ಸೌರ ಶಕ್ತಿಯಿಂದ ಕೆಲಸ ನಿರ್ವಹಿಸೋದ್ರಿಂದ ಯಾವುದೇ ತೈಲೋತ್ಪನ್ನಗಳ ಅವಶ್ಯಕತೆ ಇರೋದಿಲ್ಲ.

ಫೇಸ್​ಬುಕ್​ ಪೋಸ್ಟ್​ ಒಂದರಲ್ಲಿ ವಾಂಗ್​ಚಕ್​ ತಮ್ಮ ಅನ್ವೇಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹೊರಗಡೆ -14 ಡಿಗ್ರಿ ಸೆಲ್ಸಿಯಸ್​ ತಾಪಮಾನ ಇದ್ದರೂ ಸಹ ಸೋಲಾರ್​ ಟೆಂಟ್​ನ ಒಳಗಡೆ 15 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಈ ಟೆಂಟ್​​ನಲ್ಲಿ 8 ರಿಂದ 10 ಸೈನಿಕರು ಇರಬಹುದಾಗಿದೆ. ಒಂದೊಂದು ಟೆಂಟ್​ ಮೂವತ್ತು ಕೆಜಿ ತೂಕವನ್ನ ಹೊಂದಿದೆ.

ಅಲ್ಲದೇ ಈ ಟೆಂಟ್​ನ್ನು ಲಡಾಖ್​​ನಲ್ಲಿ ನಿರ್ಮಾಣ ಮಾಡಿದ್ದಾಗಿ ವಾಂಗ್​ಚಕ್​ ಮಾಹಿತಿ ಹಂಚಿಕೊಂಡಿದ್ದಾರೆ. ವಾಂಗ್​ಚಕ್​ರ ಅನ್ವೇಷಣೆಯನ್ನ ನೆಟ್ಟಿಗರು ಕೊಂಡಾಡಿದ್ದಾರೆ.

SOLAR HEATED MILITARY TENT for #indianarmy at #galwanvalley+15 C at 10pm. Minimum outside last night was -14 C,Uses…

Posted by Sonam Wangchuk on Saturday, February 20, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...