alex Certify ಇಲ್ಲೊಂದು ಬೆಕ್ಕಿದೆ, ಯಾರು ಬೇಗ ಪತ್ತೆ ಹಚ್ಚುವಿರಿ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲೊಂದು ಬೆಕ್ಕಿದೆ, ಯಾರು ಬೇಗ ಪತ್ತೆ ಹಚ್ಚುವಿರಿ….?

ಅರಣ್ಯಾಧಿಕಾರಿ ರಮೇಶ್ ಪಾಂಡೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿರುವ ಫೋಟೋ ಒಂದು ಈಗ ಭಾರಿ ಸದ್ದು ಮಾಡುತ್ತಿದೆ. ಅವರು ಒಂದು ಫೋಟೋ ಹಾಕಿ ಪತ್ತೇದಾರಿಕೆ ಕೆಲಸ ಮಾಡಲು ತಮ್ಮ ಟ್ವಿಟ್ಟರ್ ಹಿಂಬಾಲಕರಿಗೆ ಸೂಚಿಸಿದ್ದೇ ವೈರಲ್ ಆಗಲು ಕಾರಣವಾಯಿತು.

ಕಾಡು, ಕಾಡಿನ ತುಂಬೆಲ್ಲ ಹಸಿರುವ ಮಧ್ಯೆ ಸ್ವಲ್ಪ ಕತ್ತಲು ಕತ್ತಲು ವಾತಾವರಣ, ಮರಗಿಡಗಳು ಈ ಮಧ್ಯೆ ಫಿಶಿಂಗ್ ಕ್ಯಾಟ್ ಒಂದು ಇದೆ. ಅದನ್ನು ಪತ್ತೆ ಹಚ್ಚಿ ಎಂದು ಟಾಸ್ಕ್ ನೀಡಿದ್ದರು. ತಕ್ಷಣ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ನೆಟ್ಟಿಗರು ಕೊನೆಗೂ ಆ ಫಿಶಿಂಗ್ ಕ್ಯಾಟ್ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿ ರೌಂಡ್ ಮಾರ್ಕರ್ ನಲ್ಲಿ ಬಿಡಿಸಿ ರೀ-ಅಪ್ಲೋಡ್ ಮಾಡಿದ್ದಾರೆ.

ಈ ಫೋಟೋವನ್ನು ಹಿಮಾಲಯದ ತೆರಾಯ್ ಪ್ರದೇಶದಲ್ಲಿ ಕ್ಲಿಕ್ಕಿಸಲಾಗಿದ್ದು ಈ ಹಿನ್ನೆಲೆಯಲ್ಲಿ #TeraiTales ಎಂದು ಹ್ಯಾಷ್ ಟ್ಯಾಗ್ ಮೂಲಕ ಅಪ್ಲೋಡ್ ಮಾಡಿದ್ದಾರೆ. ಇದೊಂದು ಒಳ್ಳೆಯ ಟಾಸ್ಕ್ ಎಂದು ಒಬ್ಬ ಹೇಳಿದರೆ, ಉತ್ತಮ ಫೋಟೋಗ್ರಫಿ ಎಂದು ಮಗದೊಬ್ಬ ಹೇಳಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...