alex Certify ಚಿತ್ರದಲ್ಲಿ ಎಷ್ಟು ಆನೆಗಳಿವೆ ಲೆಕ್ಕ ಮಾಡಿ ಹೇಳಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರದಲ್ಲಿ ಎಷ್ಟು ಆನೆಗಳಿವೆ ಲೆಕ್ಕ ಮಾಡಿ ಹೇಳಿ…!

How Many Elephants Can You Spot in This Perfect Shot? Viral Photo ...

ಕಳೆದ ಎರಡು ದಿನಗಳಿಂದ ಸಾಕಷ್ಟು ನೆಟ್ಟಿಗರು ಮೊಬೈಲ್ ಅನ್ನು ವಿವಿಧ ಆ್ಯಂಗಲ್ ಗಳಲ್ಲಿ ಹಿಡಿದು ಆನೆ ಲೆಕ್ಕ ಮಾಡುತ್ತಿದ್ದಾರೆ.

ಅರೆ, ಮೊಬೈಲ್ ನಲ್ಲಿ ಆನೆ ಲೆಕ್ಕ ಎಲ್ಲಿಂದ ಬಂತು ಎನ್ನುತ್ತೀರಾ..? ಟ್ವಿಟರ್ ನಲ್ಲಿ ಬುಧವಾರ ಅಪ್ಲೋಡ್ ಆದ ಆನೆಗಳ ಗುಂಪಿನ ಫೋಟೋವೊಂದು ಸಾಕಷ್ಟು ನೆಟ್ಟಿಗರ ತಲೆ ಕೆಡಿಸಿದೆ.

ವೈಲ್ಡ್ ಲೆನ್ಸ್ ಎಂಬ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಲಾಗಿದೆ. ಅದರಲ್ಲಿ ಸರೋವರವೊಂದರಲ್ಲಿ ಆನೆಗಳು ಒಂದೇ ಸಾಲಿನಲ್ಲಿ ನಿಂತು ನೀರು ಕುಡಿಯುತ್ತಿವೆ. “ಈ ಗುಂಪಿನಲ್ಲಿ ಎಷ್ಟು ಆನೆಗಳಿವೆ ..?ಎಂದು ಪ್ರಶ್ನೆ ಮಾಡಲಾಗಿದೆ.

ಮೇಲ್ನೋಟಕ್ಕೆ ನೋಡಿದರೆ ಫೋಟೋದಲ್ಲಿ ನಾಲ್ಕು ಆನೆಗಳು ಮಾತ್ರ ಕಾಣುತ್ತವೆ. ಹೆಚ್ಚು ಆನೆಗಳು ಎಲ್ಲಿವೆ ಎಂದು ಹಲವರು ಪ್ರಶ್ನಿಸಿದ್ದಾರೆ. ಒಟ್ಟು ಏಳು ಆನೆಗಳಿವೆ ಎಂದು ವೈಲ್ಡ್ ಲೆನ್ಸ್ ಉತ್ತರಿಸಿದೆ. ಆದರೂ ನೆಟ್ಟಿಗರಿಗೆ ನಾಲ್ಕಕ್ಕಿಂತ ಹೆಚ್ಚು ಆನೆಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.

ಕೊನೆಗೆ ವೈಲ್ಡ್ ಲೆನ್ಸ್ ಆನೆಗಳ ಮೇಲೆ ನಂಬರ್ ಬರೆದು ಫೋಟೋವನ್ನು ಮತ್ತೆ ಟ್ವೀಟ್ ಮಾಡಿದೆ. ಒಟ್ಟು 6 ಆನೆಗಳಿಗೆ ಮಾತ್ರ ನಂಬರ್ ಕೊಡಲಾಗಿದೆ. ಏಳನೇ ಆನೆ ಎಲ್ಲಿದೆ ಎಂದು ಮತ್ತೆ ನೆಟ್ಟಿಗರು ಪ್ರಶ್ನಿಸಿದ್ದಾರೆ. ಅದಕ್ಕೆ ವೈಲ್ಡ್ ಲೆನ್ಸ್ ಉತ್ತರಿಸಿ, ನೋಡಿ ಕಾಣುತ್ತದೆ. ಒಂದೇ ಫ್ರೇಮ್ ನಲ್ಲಿ ಏಳು ಆನೆಗಳಿವೆ ಎಂದು ತಿಳಿಸಿದೆ.

ಅಂದಹಾಗೆ ಈ ಆನೆಗಳ ಚಿತ್ರವನ್ನು ಉತ್ತರಾಖಂಡದ ಜಿಮ್ ಕಾರ್ಬೇಟ್ ರಾಷ್ಟ್ರೀಯ ಉದ್ಯಾನದಲ್ಲಿ ಗ್ಯಾನ್ ದೀಕ್ಷಿತ್ ಎಂಬ ವನ್ಯಜೀವಿ ಛಾಯಾಗ್ರಾಹಕ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...