alex Certify ಪೌರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೌರ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್..!

ಬಹಳ ವರ್ಷಗಳಿಂದ ಚಾಲ್ತಿಯಲ್ಲಿರುವ ಮ್ಯಾನ್​ ಹೋಲ್​ ಶುದ್ಧಿ ಕಾರ್ಯಕ್ಕೆ ಕಾರ್ಮಿಕರನ್ನ ಬಳಕೆ ಮಾಡೋದನ್ನ ಸಂಪೂರ್ಣವಾಗಿ ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನನ್ನ ಜಾರಿಗೆ ತರಲು ಹೊರಟಿದೆ.

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ಈ ಹಿಂದೆಯೇ ಇದ್ದ ಪಿಇಎಂಎಸ್​ಆರ್​ ಆಕ್ಟ್​ನಲ್ಲಿ ಕೆಲ ತಿದ್ದುಪಡಿ ತಂದಿದ್ದು ವಿಶ್ವ ಶೌಚಾಲಯ ದಿನವಾದ ಗುರುವಾರದಂದು ಘೋಷಣೆ ಮಾಡಿದೆ.

ಸಫಾಯಿ ಮಿತ್ರ ಸುರಕ್ಷಾ ಸವಾಲಿನಡಿಯಲ್ಲಿ ಕೇಂದ್ರ ಸರ್ಕಾರ ಪೌರ ಕಾರ್ಮಿಕರಿಗೆ ಮ್ಯಾನ್​ಹೋಲ್​ ಕ್ಲೀನ್​ ಮಾಡುವ ಮಷಿನ್​ಗಳ ಖರೀದಿಗೆ ಅನುದಾನ ನೀಡಲಿದೆ.

ಕಾರ್ಮಿಕರು ಮ್ಯಾನ್​ಹೋಲ್​ಗಳಿಗೆ ಇಳಿಯೋದನ್ನ ತಪ್ಪಿಸುವ ಸಲುವಾಗಿ ಮಷಿನ್​ಗಳ ಖರೀದಿಗೆ ಹಣ ನೀಡಲಿದ್ದೇವೆ. ಸಂಬಂಧ ಪೌರಾಡಳಿತಗಳು ಕಾರ್ಮಿಕರಿಗೆ ಯಂತ್ರ ಖರೀದಿ ಮಾಡಿಕೊಡಬೇಕು ಅಂತಾ ಕೇಂದ್ರ ಸಚಿವ ಹರ್​ದೀಪ್​ ಸಿಂಗ್​ ಪೂರಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...