alex Certify Video | ಮತ್ತೊಂದು ಪ್ರೇರಣಾದಾಯಕ ಪೋಸ್ಟ್‌ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಮತ್ತೊಂದು ಪ್ರೇರಣಾದಾಯಕ ಪೋಸ್ಟ್‌ ಶೇರ್‌ ಮಾಡಿದ ಆನಂದ್‌ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಇವುಗಳ ಪೈಕಿ ಹಲವು ಪ್ರೇರಣಾದಾಯಕವಾಗಿರುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ಶೇರ್​ ಆಗಿದೆ. ಮ್ಯಾನ್‌ಹೋಲ್ ಸುತ್ತಲೂ ಕಾಂಕ್ರೀಟ್ ಹಾಕುವ ವ್ಯಕ್ತಿಯ ವಿಡಿಯೋವನ್ನು ಇವರು ಶೇರ್​ ಮಾಡಿದ್ದಾರೆ.

ಮೂಲತಃ ʼಹೌ ಥಿಂಗ್ಸ್ ವರ್ಕ್ʼ ಎಂಬ ಪುಟದಿಂದ ಪೋಸ್ಟ್ ಮಾಡಲಾಗಿದೆ. 27 ಸೆಕೆಂಡುಗಳ ವಿಡಿಯೋದಲ್ಲಿ, ಮ್ಯಾನ್‌ಹೋಲ್ ಸುತ್ತಲೂ ಒಬ್ಬ ವ್ಯಕ್ತಿ ಕಾಂಕ್ರೀಟ್ ಹಾಕುತ್ತಿರುವುದನ್ನು ಕಾಣಬಹುದು. ಅವರು ತಮ್ಮ ಕೆಲಸದಲ್ಲಿ ಹೆಚ್ಚು ಸಮರ್ಪಿತರಾಗಿದ್ದರು ಮತ್ತು ಎಲ್ಲಾ ಹಂತಗಳನ್ನು ನಿಖರವಾಗಿ ಅನುಸರಿಸಿದರು.

ಆನಂದ್​ ಮಹೀಂದ್ರಾ ಆ ವ್ಯಕ್ತಿಯ ಕೆಲಸದ ಬಗ್ಗೆ ಸಾಕಷ್ಟು ಪ್ರಭಾವಿತರಾಗಿದ್ದಾರೆ. “ನಿಮ್ಮ ಕೆಲಸ ಚಿಕ್ಕದ್ದೇ ಆಗಿರಲಿ, ಅದು ಮುಖ್ಯವಲ್ಲ, ಬದಲಿಗೆ ನಿಮ್ಮ ಕೆಲಸದಲ್ಲಿ ಗುಣಮಟ್ಟಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತೀರಿ ಎನ್ನುವುದು ಮುಖ್ಯ ಎನ್ನುವ ಮೂಲಕ ಈ ಯುವಕನ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 2 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಟ್ವಿಟ್ಟರ್ ಬಳಕೆದಾರರು ಕೈಗಾರಿಕೋದ್ಯಮಿಯ ಮಾತನ್ನು ಒಪ್ಪಿಕೊಂಡು ಕಮೆಂಟ್​ ಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...