alex Certify ಉತ್ತರ ಪ್ರದೇಶದಿಂದಲೇ ʼಹಿಮಾಲಯʼ ದರ್ಶನ: ವೈರಲ್​ ಆಯ್ತು ಅದ್ಭುತ ದೃಶ್ಯಾವಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದಿಂದಲೇ ʼಹಿಮಾಲಯʼ ದರ್ಶನ: ವೈರಲ್​ ಆಯ್ತು ಅದ್ಭುತ ದೃಶ್ಯಾವಳಿ

ಕೋವಿಡ್​ 19 ನಿರ್ಬಂಧಗಳು ಹಾಗೂ ತೌಕ್ತೆ ಚಂಡಮಾರುತದ ಅಬ್ಬರಗಳ ನಡುವೆಯೇ ಖುಷಿಯ ವಿಚಾರ ಎಂಬಂತೆ ಉತ್ತರ ಪ್ರದೇಶ ಸಹರನ್​ಪುರ್ ಜನತೆ ಹಿಮಾಲಯ ಪರ್ವತ ಶ್ರೇಣಿಯನ್ನ ಕಣ್ತುಂಬಿಕೊಂಡಿದ್ದಾರೆ.

ಸಹರನ್​ಪುರ ನಿವಾಸಿಗಳಿಗೆ ಹಿಮಾಲಯ ಪರ್ವತ ಶ್ರೇಣಿಯ ದರ್ಶನವಾಗಿದ್ದು ಈ ಫೊಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸಹರನ್ಪುರದಿಂದ ಹಿಮಾಲಯ ಪರ್ವತವು 150 ಕಿಲೋಮೀಟರ್​ ದೂರವಿದೆ. ತೌಕ್ತೆ ಚಂಡಮಾರುತದಿಂದಾಗಿ ಉತ್ತರ ಭಾರತದಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗಿದೆ. ಮುಂಜಾನೆಯೇ ಹಿಮಾಲಯದ ಈ ಸುಂದರ ದೃಶ್ಯಗಳು ಉತ್ತರ ಪ್ರದೇಶ ವ್ಯಾಪ್ತಿಯ ನಗರದಿಂದ ಕಾಣಿಸಿದೆ. ಈ ಫೋಟೋಗಳನ್ನ ಐಎಎಸ್​ ಅಧಿಕಾರಿ ಡಾ. ವಿವೇಕ್​ ಬ್ಯಾನರ್ಜಿ ಟ್ವೀಟ್​ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿದೆ.

— Dushyant Kumar (@DushyantKSaini) May 20, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...