alex Certify ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತೆ ಧಾರವಾಹಿಯ ಈ ʼದೃಶ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತೆ ಧಾರವಾಹಿಯ ಈ ʼದೃಶ್ಯʼ

ಭಾರತೀಯ ಟಿವಿ ಚಾನೆಲ್​ಗಳಲ್ಲಿ ಪ್ರಸಾರವಾಗುವ ಧಾರವಾಹಿಗಳಲ್ಲಿ ತೋರಿಸಲಾಗೋ ಫ್ಯಾಂಟಸಿ ದೃಶ್ಯಗಳು ಒಮ್ಮೊಮ್ಮೆ ಆ ಧಾರಾವಾಹಿಗಳನ್ನ ನಗೆಪಾಟಲಿಗೀಡಾಗುವಂತೆ ಮಾಡುತ್ತೆ. ಇದೀಗ ಅಂತಹದ್ದೇ ಒಂದು ಧಾರವಾಹಿಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಮಹಿಳೆ ತನ್ನ ಮದುವೆಯಾಗುವ ಹುಡುಗ ಚಂದ್ರನ ಚೂರನ್ನ ಭೂಮಿಗೆ ತರಬೇಕು ಎಂದು ಸವಾಲನ್ನ ಎಸೆಯುತ್ತಾಳೆ. ಕೂಡಲೇ ಯುವಕ ಲೇಸರ್​ ಹಗ್ಗವನ್ನ ಬಳಸಿ ಚಂದ್ರನ ಚೂರನ್ನ ಕೀಳಲು ನೋಡಿದ್ರೆ ಇನ್ನೊಬ್ಬ ಯುವಕ ಕಾರನ್ನೇ ಆಕಾಶಕ್ಕೆ ತೆಗೆದುಕೊಂಡು ಹೋಗಿ ಚಂದ್ರನ ಬಳಿ ಲ್ಯಾಂಡ್ ಆಗಲು ಯತ್ನಿಸಿದ್ದಾನೆ. ಎರಡನೇ ಯುವಕ ಚಂದ್ರನ ತುಂಡನ್ನ ಭೂಮಿಗೆ ತರುವಲ್ಲಿ ಯಶಸ್ವಿಯಾಗ್ತಾನೆ.

ʼಯೆ ಜಾದೂ ಹೈ ಜಿನ್​ ಕಾʼ ಎಂಬ ಧಾರವಾಹಿಯ ದೃಶ್ಯ ಇದಾಗಿದೆ. 2019ರ ಅಕ್ಟೋಬರ್​ ತಿಂಗಳಿನಿಂದ ಕಳೆದ ವರ್ಷ ನವೆಂಬರ್​ವರೆಗೆ ಈ ಧಾರವಾಹಿ ಪ್ರಸಾರವಾಗಿತ್ತು. ಈ ಧಾರವಾಹಿಯಲ್ಲಿ ವಿಕ್ರಂ ಸಿಂಗ್​ ಚೌಹಾಣ್​ ಹಾಗೂ ಅದಿತಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ರು. ಇದೀಗ ಈ ಧಾರವಾಹಿಯ ಚಾಂದ್​​ ಕಾ ಟುಕುಡಾ ದೃಶ್ಯ ಸಖತ್​ ವೈರಲ್​ ಆಗಿದೆ. ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಈ ದೃಶ್ಯವನ್ನ ವ್ಯಾಪಕವಾಗಿ ಶೇರ್ ಮಾಡಲಾಗ್ತಾ ಇದ್ದು ನೆಟ್ಟಿಗರು ಬಿದ್ದು ಬಿದ್ದು ನಗ್ತಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...