alex Certify ಕೊರೊನಾ ಓಡಿಸಲು ತುಳಸಿ, ಬೇವಿನೆಲೆ ಮಾಸ್ಕ್‌ ಧರಿಸಿದ ಸಾಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಓಡಿಸಲು ತುಳಸಿ, ಬೇವಿನೆಲೆ ಮಾಸ್ಕ್‌ ಧರಿಸಿದ ಸಾಧು

ಕೊರೊನಾ ವೈರಸ್​ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್​ ಬಳಕೆಯನ್ನ ಕಡ್ಡಾಯ ಮಾಡಲಾಗಿದೆ. ಆದರೆ ಮಾಸ್ಕ್​ ವಿಚಾರದಲ್ಲೂ ಅನೇಕ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗ್ತಾನೇ ಇರುತ್ತದೆ.

ಇದೀಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಸಾಧುವೊಬ್ಬ ಕಹಿ ಬೇವಿನ ಎಲೆ ಹಾಗೂ ತುಳಸಿಯನ್ನ ಬಳಸಿದ ಮಾಸ್ಕ್ ಧರಿಸಿದ್ದು ಈ ವಿಡಿಯೋ ಭಾರೀ ವೈರಲ್​ ಆಗಿದೆ. ಈ ವಿಡಿಯೋವನ್ನ ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಶೇರ್ ಮಾಡಿದ್ದಾರೆ.

ಈ ಮಾಸ್ಕ್​​ ಸಹಾಯ ಮಾಡುತ್ತೋ ಇಲ್ಲವೇ ನನಗೆ ತಿಳಿದಿಲ್ಲ. ಆದರೆ ಅನಿವಾರ್ಯತೆ ಅನ್ನೋದು ಯಡವಟ್ಟಿಗೆ ದಾರಿಯಿದ್ದಂತೆ. ಮಾಸ್ಕ್​ ಹಾಗೂ ಔಷಧಿ ಎಂದು ಶೀರ್ಷಿಕೆ ನೀಡಿದ್ದಾರೆ.

ಅಂದ ಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ. ವ್ಯಕ್ತಿಯೊಬ್ಬ ಸಾಧುವಿನ ಬಳಿ ಹೋಗಿ ಇದೇನು ಮಾಸ್ಕ್​​ ಎಂದು ಕೇಳಿದ್ದಾರೆ. ಈ ವೇಳೆ ಸಾಧು ತುಳಸಿ ಹಾಗೂ ಬೇವಿನ ಎಲೆಯನ್ನ ಹಾಕಿರುವ ಈ ಮಾಸ್ಕ್​​ ಸರ್ಜಿಕಲ್​ ಮಾಸ್ಕ್​ಗಿಂತಲೂ ಹೆಚ್ಚು ಪರಿಣಾಮಕಾರಿ ಎಂದು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡ್ತಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...