ನೆಟ್ಟಿಗರ ಮನ ಗೆದ್ದಿದೆ ಪ್ರವಾಸಿಗನ ಈ ಹೃದಯಸ್ಪರ್ಶಿ ವಿಡಿಯೋ..! 19-04-2021 12:31PM IST / No Comments / Posted In: Latest News, India ಮಾನವೀಯತೆ ಅನ್ನೋದು ಪ್ರತಿಯೊಬ್ಬ ಮನುಷ್ಯನಲ್ಲಿ ಇರಲೇಬೇಕಾದ ಗುಣ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಮಾನವೀಯ ವ್ಯಕ್ತಿಗಳ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತೆ. ಮನುಷ್ಯ – ಮನುಷ್ಯನ ನಡುವೆ ಮಾತ್ರವಲ್ಲದೇ ಮನುಷ್ಯ ಹಾಗೂ ಪ್ರಾಣಿಗಳ ನಡುವೆಯೂ ಮಾನವೀಯ ಬಂಧವಿದೆ ಅನ್ನೋ ಮಾತನ್ನೂ ನಾವು ತೆಗೆದು ಹಾಕುವಂತಿಲ್ಲ. ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಟ್ವಿಟರ್ ಪೇಜ್ನಲ್ಲಿ ಇಂತದ್ದೊಂದು ವಿಡಿಯೋವನ್ನ ಶೇರ್ ಮಾಡಿದ್ದಾರೆ. ಮೊಟ್ಟೆ ಎಂದುಕೊಂಡು ಏರ್ಪಾಡ್ಗಳನ್ನೇ ತಿಂದು ತೇಗಿದೆ ಈ ಶ್ವಾನ…..! ಈ ವಿಡಿಯೋದಲ್ಲಿ ಪ್ರವಾಸಿಗನೊಬ್ಬ ಬಾಯಾರಿದ್ದ ಕೋತಿಗೆ ಬಾಟಲಿಯಿಂದ ನೀರುಣಿಸಿದ್ದಾನೆ. ಕೆಲವೇ ನಿಮಿಷಗಳಲ್ಲಿ ಅಲ್ಲೇ ಇದ್ದ ಇನ್ನೊಂದು ಕೋತಿ ಈತನ ಕೈನಿಂದ ಬಾಟಲಿಯನ್ನ ಕಸಿಯಲು ಯತ್ನಿಸಿದೆ. ಇನ್ನೊಂದು ಕೋತಿಗೆ ಪ್ರವಾಸಿಗ ನೀರುಣಿಸುತ್ತಿದ್ದ ವೇಳೆ ಪುಟ್ಟ ಕೋತಿ ಪ್ರವಾಸಿಗನ ಸಮೀಪವೇ ಬಂದು ಕುಳಿತುಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. In a world where you can be anything, be kind pic.twitter.com/47preqtT9c — Susanta Nanda (@susantananda3) April 17, 2021