alex Certify ಮೊಟ್ಟೆ ಎಂದುಕೊಂಡು ಏರ್​ಪಾಡ್​ಗಳನ್ನೇ ತಿಂದು ತೇಗಿದೆ ಈ ಶ್ವಾನ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಟ್ಟೆ ಎಂದುಕೊಂಡು ಏರ್​ಪಾಡ್​ಗಳನ್ನೇ ತಿಂದು ತೇಗಿದೆ ಈ ಶ್ವಾನ…..!

ಈಸ್ಟರ್​ ಹಬ್ಬದ ಸಿಹಿ ತಿಂಡಿ ಎಂದು ಭಾವಿಸಿ ಗೋಲ್ಡನ್​ ರಿಟ್ರೈವರ್​​ ಶ್ವಾನ ಏರ್​ಪಾಡ್ಸ್​​ ನುಂಗಿ ಹಾಕಿದ್ದು ಈ ವಿಚಾರ ತಿಳಿದ ಶ್ವಾನದ ಮಾಲೀಕೆ ರಷೆಲ್​ ಹಿಕ್ಸ್ ಶಾಕ್​ ಆಗಿದ್ದಾರೆ.

ಈಸ್ಟರ್​ ಭಾನುವಾರದಂದು ಶ್ವಾನಕ್ಕೆ ರಷೆಲ್​ ಈಸ್ಟರ್​ ಎಗ್​ನ್ನು ಸವಿಯಲು ನೀಡಿದ್ದರು. ಆದರೆ ಈ ವೇಳೆಯಲ್ಲಿ ರಷೆಲ್​ ಪಾಕೆಟ್​ನಿಂದ ಏರ್​ಪಾಡ್​ಗಳು ಬಿದ್ದು ಹೋಗಿದ್ದವು. ನೆಲದ ಮೇಲೆ ಬಿದ್ದಿದ್ದ ಏರ್​ ಪಾಡ್​​ಗಳನ್ನ ರಷೆಲ್​ ಎತ್ತಿಕೊಳ್ಳುವ ಮುನ್ನವೇ ಶ್ವಾನ ಅದನ್ನ ನುಂಗಿ ಹಾಕಿದೆ.

ಕೂಡಲೇ ಶ್ವಾನವನ್ನ ರಷೆಲ್​ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ಹಿರಿಯ ಪಶು ವೈದ್ಯ ಸುಸಾನಾ ಜೌರೆಗಿ ಶ್ವಾನಕ್ಕೆ ತುರ್ತು ಶಸ್ತ್ರಚಿಕಿತ್ಸೆ ಕೈಗೊಂಡ್ರು.

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದಿದ್ದು ಮಾತ್ರವಲ್ಲದೇ ಏರ್​ಪಾಡ್​ ಕೂಡ ಒಂದು ಚೂರು ಹಾನಿಗೆ ಒಳಗಾಗದೇ ರಷೆಲ್​ ಕೈ ಸೇರಿದೆ. ಕೆಲ ಗಂಟೆಗಳ ಕಾಲ ಶ್ವಾನದ ಹೊಟ್ಟೆಯಲ್ಲಿ ಇದ್ದು ಬಂದ ಬಳಿಕವೂ ಈ ಏರ್​ಪಾಡ್​ ಸರಿಯಾಗೇ ಕಾರ್ಯ ನಿರ್ವಹಿಸುತ್ತಿದೆ.

ಬ್ಯಾಟರಿಯಲ್ಲಿರುವ ಆಸಿಡ್​ ಅಂಶ ಶ್ವಾನದ ಆರೋಗ್ಯಕ್ಕೆ ತುಂಬಾ ದೊಡ್ಡ ಮಟ್ಟದಲ್ಲಿ ಹಾನಿ ತಂದೊಡ್ಡಬಹುದು . ಹೀಗಾಗಿ ಮಾಲೀಕರು ಈ ವಿಚಾರದಲ್ಲಿ ಆದಷ್ಟು ಜಾಗ್ರತೆ ವಹಿಸಿ ಅಂತಾ ಸುಸಾನ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...