alex Certify ಮಗ ಸತ್ತ ವರ್ಷದ ಬಳಿಕ ತಾಯಿಗೆ ಸಿಕ್ತು ಡೆತ್​ ನೋಟ್​…! ಅದರಲ್ಲಿತ್ತು ಶಾಕಿಂಗ್‌ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗ ಸತ್ತ ವರ್ಷದ ಬಳಿಕ ತಾಯಿಗೆ ಸಿಕ್ತು ಡೆತ್​ ನೋಟ್​…! ಅದರಲ್ಲಿತ್ತು ಶಾಕಿಂಗ್‌ ಸಂಗತಿ

ಮಗ ಸತ್ತು ಒಂದು ವರ್ಷದ ಬಳಿಕ ತಾಯಿಗೆ ಆಕೆಯ ಪುತ್ರ ಬರೆದಿದ್ದ ಸೂಸೈಡ್​ ನೋಟ್​​ ಸಿಕ್ಕ ವಿಚಿತ್ರ ಘಟನೆ ವರದಿಯಾಗಿದೆ. ಆತ್ಮಹತ್ಯೆ ಪತ್ರದಲ್ಲಿ ಆತ ತಾನು ಈ ಹೆಜ್ಜೆ ಇಡಲು ಪ್ರಚೋದನೆ ನೀಡಿದ ಕಾರಣ ಏನೆಂಬುದನ್ನ ಬಹಿರಂಗಪಡಿಸಿದ್ದಾನೆ.

ಲೀಲಾ ಜಾಧವ್​ ಎಂಬ ಮಹಿಳೆಯ 42 ವರ್ಷದ ಪುತ್ರ ಕಳೆದ ವರ್ಷ ಏಪ್ರಿಲ್​ 9ರಂದು ಆತ್ಮಹತ್ಯೆಗೆ ಶರಣಾಗಿದ್ದ. ಆತ ಆತ್ಮಹತ್ಯೆಗೆ ಶರಣಾಗಿ ಒಂದು ದಿನದ ಬಳಿಕ ನರ್ಮದಾ ಕಾಲುವೆಯಿಂದ ಆತನ ಶವವನ್ನ ಹೊರತೆಗೆಯಲಾಗಿತ್ತು.

ಆದರೆ ತನ್ನ ಮಗ ಯಾಕೆ ಈ ರೀತಿ ಮಾಡಿಕೊಂಡಿದ್ದಾನೆ ಅನ್ನೋದ್ರ ಬಗ್ಗೆ ಲೀಲಾ ಜಾಧವ್​ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಮಗ ಸತ್ತು ವರ್ಷ ಕಳೆಯಲು ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ಮಗ ಬರೆದಿದ್ದ ಡೆತ್​ ನೋಟ್​ ಲಭಿಸಿದೆ.

ಜನವರಿ ತಿಂಗಳ ಮೊದಲ ವಾರದಲ್ಲಿ ಲೀಲಾ ಮಗನಿಗೆ ಸೇರಿದ್ದ ಕಪಾಟನ್ನ ಸ್ವಚ್ಛ ಮಾಡುತ್ತಿದ್ದ ವೇಳೆ ಈ ಡೆತ್ ನೋಟ್​ ಲಭ್ಯವಾಗಿದೆ. ಬೆಡ್​ಶೀಟ್​ನ ಮಡಿಕೆಗಳ ಅಡಿಯಲ್ಲಿ ಈ ಪತ್ರ ಲಭ್ಯವಾಗಿದೆ.

ಇದರಲ್ಲಿ ಆತ ತನ್ನ ಆತ್ಮಹತ್ಯೆ ಹಿಂದಿನ ಕಾರಣ ತಿಳಿಸಿದ್ದು, ಪತ್ನಿ ತನ್ನ ಮುಂದೆಯೇ ಪರಪುರುಷನೊಂದಿಗೆ ಚಕ್ಕಂದವಾಡುತ್ತಿದ್ದಳು. ಈ ಕುರಿತು ತಿಳಿ ಹೇಳಿದ ವೇಳೆ ನೀನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥ ಎಂದು ಹಂಗಿಸುತ್ತಿದ್ದಳು ಎಂದು ಹೇಳಿದ್ದಾನೆ. ಇದರಿಂದ ಮನನೊಂದು ತಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...