ತ್ವಚೆಯ ಕಾಂತಿಯನ್ನು ಹೆಚ್ಚಿಸುವ ಸೊಪ್ಪುಗಳಲ್ಲಿ ಪಾಲಕ್ ಕೂಡಾ ಒಂದು.
ಇದರಲ್ಲಿರುವ ಪೌಷ್ಟಿಕ ಅಂಶಗಳು ವಿಟಮಿನ್ ಗಳು, ಆಂಟಿ ಆಕ್ಸಿಡೆಂಟ್ ಗಳು ಸಂಪೂರ್ಣ ಆರೋಗ್ಯದ ರಕ್ಷಣೆ ಮಾಡುವಲ್ಲಿ ನೆರವಾಗುತ್ತದೆ.
ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಇದರ ಜ್ಯೂಸ್ ತಯಾರಿಸಿ ಕುಡಿಯುವುದು ಬಹಳ ಒಳ್ಳೆಯದು.
ಪಾಲಕ್ ಸೊಪ್ಪನ್ನು ಸ್ವಚ್ಛವಾಗಿ ತೊಳೆದಿಡಿ. ತಯಾರಿ ವೇಳೆ ಎರಡು ಕಪ್ ಪಾಲಕ್ ಸೊಪ್ಪಿನ ಎಲೆಗಳಿಗೆ ಅರ್ಧ ಕಪ್ ಬಾದಾಮಿ ಬೀಜಗಳನ್ನು ಸೇರಿಸಿ ರುಬ್ಬಿ. ಬಾದಾಮಿಯನ್ನು ಮೊದಲೇ ನೆನೆಸಿಟ್ಟು ಸಿಪ್ಪೆ ತೆಗೆದಿಟ್ಟುಕೊಳ್ಳಿ.
ಅದಕ್ಕೆ ಸ್ವಲ್ಪ ಜೇನುತುಪ್ಪ, ನಿಂಬೆರಸ ಹಾಗೂ ನೀರು ಬೆರೆಸಿ ಕುಡಿಯಿರಿ. ಚಳಿಗಾಲದಲ್ಲಿ ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ಇದನ್ನು ಕುಡಿಯುವುದರಿಂದ ತ್ವಚೆಯ ಹೊಳಪು ಹೆಚ್ಚುವುದು ಮಾತ್ರವಲ್ಲ ತ್ವಚೆ ಬಿರುಕು ಬಿಡುವ ಸಮಸ್ಯೆಯೂ ದೂರವಾಗುತ್ತದೆ.
ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಎ ಅಂಶ ತ್ವಚೆಯನ್ನು ಹಲವು ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕಿನಿಂದ ನಿಮ್ಮನ್ನು ಬಚಾವಾಗಿಸುತ್ತದೆ. ಹಾಗಾಗಿ ಚಳಿಗಾಲದ ತ್ವಚೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮರೆಯದೆ ಪಾಲಕ್ ಸೊಪ್ಪು ಸೇವಿಸಿ.