alex Certify BIG NEWS: ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ʼಕೊರೊನಾʼ ಸೋಂಕಿತರಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ʼಕೊರೊನಾʼ ಸೋಂಕಿತರಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಸಲಹೆ

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರು ಉಸಿರಾಟದ ಸಮಸ್ಯೆ ಅನುಭವಿಸಿದರೆ ಮಾಡಬೇಕಾದ ಪ್ರೋನಿಂಗ್​ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ.

ಆಮ್ಲಜನಕ ಮಟ್ಟವನ್ನ ಸುಧಾರಿಸಿಕೊಳ್ಳಲು ಮಾಡಬೇಕಾದ ಪ್ರೋನಿಂಗ್​ ಬಗ್ಗೆ ವಿಸ್ತೃತ ವರದಿಯನ್ನ ತಯಾರಿಸಲಾಗಿದೆ.

ದೇಶದಲ್ಲಿ ಕೊರೊನಾ ಕೇಸ್​ ಹೆಚ್ಚಾಗುತ್ತಿರೋದ್ರ ಹಿನ್ನೆಲೆ ಆಸ್ಪತ್ರೆಗಳ ಅಭಾವ ಕಂಡುಬರ್ತಿದೆ. ಹೀಗಾಗಿ ವೈದ್ಯರು ಆದಷ್ಟು ಮನೆಯಲ್ಲೇ ಚಿಕಿತ್ಸೆ ಪಡಯಿರಿ ಎಂದು ಮನವಿ ಮಾಡ್ತಿದ್ದಾರೆ.

ಒಂದು ವೇಳೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ ಉಸಿರಾಟದ ಸಮಸ್ಯೆ ಅನುಭವಿಸಿದ್ದರೆ ಅಂತ ರೋಗಿಗಳಿಗ ಬೋರಲು ಹಾಕಿಕೊಂಡು ಮಲಗಬೇಕು ಎಂದು ಹೇಳಲಾಗಿದೆ.

ಬೋರಲು ಹಾಕಿ ಮಲಗಿದ್ರೆ ಆಮ್ಲಜನಕದ ಸಂಚಾರ ಸರಾಗವಾಗುತ್ತೆ ಎಂಬ ಮಾತು ವೈಜ್ಞಾನಿಕವಾಗಿ ಸಾಬೀತಾಗಿದೆ. ಆಮ್ಲಜನಕದ ಮಟ್ಟ 94ಕ್ಕಿಂತ ಕೆಳಗೆ ಇಳಿದರೆ ಆ ರೋಗಿಯು ಹೊಟ್ಟೆ ಹಾಗೂ ಮುಖವನ್ನ ಕೆಳಗೆ ಹಾಕಿ ಮಲಗಬೇಕು ಎಂದು ಸಲಹೆ ನೀಡಲಾಗಿದೆ.

ಈ ಪ್ರೋನಿಂಗ್​ ಮಾಡಲು ನಿಮಗೆ ನಾಲ್ಕರಿಂದ ಐದು ದಿಂಬುಗಳ ಅವಶ್ಯಕತೆ ಇದೆ. ಒಂದು ದಿಂಬು ಕುತ್ತಿಗೆ ಕೆಳಗೆ, ಇನ್ನೊಂದು ಎದೆಯ ಕೆಳಗೆ ಇನ್ನೊಂದು ತೊಡೆ ಹಾಗೂ ಉಳಿದ ಎರಡು ದಿಂಬುಗಳನ್ನ ಮೊಣಕಾಲಿನ ಕೆಳಗೆ ಇಡಬೇಕು. ಇದೇ ಸ್ಥಿತಿಯಲ್ಲಿ ಬೋರಲು ಹಾಕಿ 30 ನಿಮಿಷಗಳ ಕಾಲ ಮಲಗಬೇಕು.

ಈ ಪ್ರೋನಿಂಗ್​​ನ್ನು ಯಾರ್ಯಾರು ಮಾಡಬಾರದು ಅನ್ನೋದನ್ನೂ ಕೇಂದ್ರ ಸಚಿವಾಲಯ ಪಟ್ಟಿ ಮಾಡಿದೆ :

ಗರ್ಭಿಣಿ

ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದಲ್ಲಿ

ಹೃದಯ ಸಂಬಂಧಿ ಗಂಭೀರ ಕಾಯಿಲೆಗಳನ್ನ ಹೊಂದಿರುವವರಿಗೆ

ಬೆನ್ನುಮೂಳೆ ಸಮಸ್ಯೆ, ಪೆಲ್ವಿಕ್​ ಮುರಿತ

ಪ್ರೋನಿಂಗ್​ ಮಾಡುವ ವೇಳೆ ಗಮನದಲ್ಲಿಡಬೇಕಾದ ಅಂಶಗಳು :

ಆಹಾರ ಸೇವಿಸಿದ ಒಂದು ಗಂಟೆಯಲ್ಲಿ ಮಾಡಬಾರದು

ಸಹಿಸಿಕೊಳ್ಳಬಹುದು ಎನಿಸಿದಾಗ ಮಾತ್ರ ಪ್ರೋನಿಂಗ್​ ಮಾಡಬೇಕು

ಪ್ರೋನಿಂಗ್​ ಮಾಡುವ ವೇಳೆ ನಿಮ್ಮ ದೇಹ ನ್ಯೂನ್ಯತೆ ಗಮನದಲ್ಲಿರಲಿ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...