alex Certify ಕರೊನಾದಿಂದ ಬಚಾವಾದ 106 ವರ್ಷದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರೊನಾದಿಂದ ಬಚಾವಾದ 106 ವರ್ಷದ ಮಹಿಳೆ

ಕರೊನಾವು ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಜೀವ ಹಾನಿಗೆ ಕಾರಣವಾಗಿದೆ. ಇದು ನಿಜಕ್ಕೂ ಆತಂಕದ ವಿಚಾರ.
ಈ ಚಿಂತಾಜನಕ ಪರಿಸ್ಥಿತಿಯಲ್ಲಿ ಅನೇಕರು ಚೇತರಿಸಿಕೊಳ್ಳುತ್ತಿರುವ ಉದಾಹರಣೆಗಳು ಕಂಡುಬಂದಿದೆ. ಇಂಥ ಒಂದು ಸರಣಿಯಲ್ಲಿ 106 ವರ್ಷದ ಒಬ್ಬರು ಬದುಕುಳಿದಿದ್ದಾರೆ.

ಸೆಂಟ್ರಲ್ ದೆಹಲಿಯ ನವಾಬ್ ಗಂಜ್ ನಿವಾಸಿ ಮುಕ್ತಾರ್ ಅಹ್ಮದ್ ಏಪ್ರಿಲ್ 14ರಂದು ರಾಜೀವ್ ಗಾಂಧಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ ಒಂದರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತಮ್ಮ ಮಗನ ಮೂಲಕ ಅವರು ಸೋಂಕು ಹಂಚಿಕೊಂಡಿದ್ದರು.

ವೃದ್ಧರ ಚೇತರಿಕೆಯನ್ನು ಕಂಡು ಆಸ್ಪತ್ರೆಯ ವೈದ್ಯರು ಖುಷಿಪಟ್ಟಿದ್ದಾರೆ. ಇವರು ಚೇತರಿಸಿಕೊಂಡಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ ಜೊತೆಗೆ ಸ್ಪೂರ್ತಿದಾಯಕ ಸುದ್ದಿ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಮೂಲಕ ನೂರು ವರ್ಷ ವಯಸ್ಸಾದವರು ಸಹ ಕರೊನಾ ವಿರುದ್ಧ ಹೋರಾಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂದಿದ್ದಾರೆ. ಸದ್ಯಕ್ಕೆ ಅವರ ಕುಟುಂಬ ಸದಸ್ಯರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದಕ್ಕೆ ಸೂಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...