alex Certify ಹರಿಯಾಣದಲ್ಲಿ ನಡೆದಿದೆ ಮಾನವಕುಲ ತಲೆತಗ್ಗಿಸುವ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಿಯಾಣದಲ್ಲಿ ನಡೆದಿದೆ ಮಾನವಕುಲ ತಲೆತಗ್ಗಿಸುವ ಘಟನೆ

ಹರಿಯಾಣದ ಪಾಲ್ವಾಲ್ ಜಿಲ್ಲೆಯ ಹಸನ್ಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ನಾಚಿಕೆಗೇಡಿನ ಪ್ರಕರಣ ಬೆಳಕಿಗೆ ಬಂದಿದೆ. ಪಾಲ್ವಾಲ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೇ 3 ರಂದು ಘಟನೆ ನಡೆದಿದೆ. 25 ಮಂದಿ ಹುಡುಗಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಹುಡುಗಿ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಕೆಲ ದಿನಗಳ ಹಿಂದೆ ರಾಮ್ಗಡ್ ನ ಸಾಗರ್ ಜೊತೆ ಹುಡುಗಿ ಸ್ನೇಹ ಬೆಳೆದಿತ್ತು. ಮೇ 3ರಂದು ಕುಟುಂಬಸ್ಥರನ್ನು ಭೇಟಿ ಮಾಡಿಸುವುದಾಗಿ ಸಾಗರ್ ಹುಡುಗಿಯನ್ನು ಕರೆದಿದ್ದಾನೆ. ಆತನ ಮಾತು ನಂಬಿ ಹುಡುಗಿ ಹೋಗಿದ್ದಾಳೆ. ಮನೆಗೆ ಕರೆದುಕೊಂಡು ಹೋಗುವ ಬದಲು ಕಾಡಿಗ ಕರೆದೊಯ್ದ ಸಾಗರ್ ಅತ್ಯಾಚಾರವೆಸಗಿದ್ದಾನೆ. ಆತನ ಜೊತೆ ಬಂದಿದ್ದ 24 ಮಂದಿಯೂ ಅತ್ಯಾಚಾರವೆಸಗಿದ್ದಾರೆ.

ಹುಡುಗಿ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯನ್ನು ದೆಹಲಿ-ಬಾದರ್ಪುರ ಗಡಿಯಲ್ಲಿ ಎಸೆದು ಹೋಗಲಾಗಿದೆ. ಹಾಸಿಗೆಯಲ್ಲಿದ್ದ ಹುಡುಗಿ ಮೇ 12ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ಸಾಗರ್ ಸೇರಿ 24 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಆದ್ರೆ ಈವರೆಗೂ ಯಾರನ್ನೂ ಬಂಧಿಸಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...