ಹೆಸರಾಂತ ಕುರುಕಲು ತಿಂಡಿ ಕಂಪನಿ ಹಳದಿರಾಮ್ನ ಖಾಸಗಿ ದಾಖಲೆಗಳನ್ನ ಸೈಬರ್ ಕ್ರಿಮಿನಲ್ಗಳು ಹ್ಯಾಕ್ ಮಾಡಿದ್ದಾರೆ. ಅಲ್ಲದೇ ಈ ದಾಖಲೆಗಳನ್ನ ಕೊಡೋಕೆ 7,50,000 ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ. ಹ್ಯಾಕ್ ಆದ ದಾಖಲೆಗಳಲ್ಲಿ ಹಳದಿರಾಮ್ನ ಆರ್ಥಿಕ ವಹಿವಾಟು ಹಾಗೂ ಮಾರಾಟದ ವಿವರಗಳೂ ಸೇರಿವೆ ಎನ್ನಲಾಗಿದೆ.
ಈ ದಾಖಲೆಗಳನ್ನ ಹ್ಯಾಕರ್ಸ್ ಅಕ್ಟೋಬರ್ 12 ಹಾಗೂ 13ರಂದು ಹ್ಯಾಕರ್ಸ್ ಈ ಕೃತ್ಯ ಎಸಗಿರೋ ಶಂಕೆ ವ್ಯಕ್ತವಾಗಿದೆ. ಹಳದಿರಾಮ್ ಕಂಪನಿ ಈ ಸಂಬಂಧ ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಮಾಡಿದೆ.
ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಕಂಪನಿ ಸರ್ವರ್ನ್ನ ಬಳಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಕದ್ದ ಮಾಹಿತಿಯನ್ನ ಅಳಿಸಿ ಹಾಕೋಕೇ ಹ್ಯಾಕರ್ಸ್ 7 ಲಕ್ಷದ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಅಂತಾ ಹಳದಿ ರಾಮ್ ಕಂಪನಿ ಹೇಳಿದೆ.
ಈ ಸಂಬಂಧ ತನಿಖೆ ಕೈಗೆತ್ತಿಕ್ಕೊಂಡಿರೋ ನೋಯ್ಡಾ ಠಾಣೆ ಪೊಲೀಸರು ಹ್ಯಾಕರ್ಸ್ಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ನೋಯ್ಡಾ ಹೆಚ್ಚುವರಿ ಪೊಲೀಸ್ ಆಯುಕ್ತ ರಣವಿಜಯ್ ಸಿಂಗ್ ಆರೋಪಿಗಳ ವಿರುದ್ಧ ಸೆಕ್ಷನ್ 420 ಹಾಗೂ 384 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಅಂತಾ ಮಾಹಿತಿ ನೀಡಿದ್ರು.