alex Certify ಹಳದಿರಾಮ್​ ಕಂಪನಿ ದಾಖಲೆ ಹ್ಯಾಕ್​ ಮಾಡಿ ಹಣಕ್ಕೆ ಬೇಡಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳದಿರಾಮ್​ ಕಂಪನಿ ದಾಖಲೆ ಹ್ಯಾಕ್​ ಮಾಡಿ ಹಣಕ್ಕೆ ಬೇಡಿಕೆ…!

ಹೆಸರಾಂತ ಕುರುಕಲು ತಿಂಡಿ ಕಂಪನಿ ಹಳದಿರಾಮ್​ನ ಖಾಸಗಿ ದಾಖಲೆಗಳನ್ನ ಸೈಬರ್​​ ಕ್ರಿಮಿನಲ್​​ಗಳು ಹ್ಯಾಕ್​ ಮಾಡಿದ್ದಾರೆ. ಅಲ್ಲದೇ ಈ ದಾಖಲೆಗಳನ್ನ ಕೊಡೋಕೆ 7,50,000 ರೂಪಾಯಿ ಡಿಮ್ಯಾಂಡ್​ ಮಾಡಿದ್ದಾರೆ. ಹ್ಯಾಕ್​ ಆದ ದಾಖಲೆಗಳಲ್ಲಿ ಹಳದಿರಾಮ್​ನ ಆರ್ಥಿಕ ವಹಿವಾಟು ಹಾಗೂ ಮಾರಾಟದ ವಿವರಗಳೂ ಸೇರಿವೆ ಎನ್ನಲಾಗಿದೆ.

ಈ ದಾಖಲೆಗಳನ್ನ ಹ್ಯಾಕರ್ಸ್​ ಅಕ್ಟೋಬರ್​ 12 ಹಾಗೂ 13ರಂದು ಹ್ಯಾಕರ್ಸ್ ಈ ಕೃತ್ಯ ಎಸಗಿರೋ ಶಂಕೆ ವ್ಯಕ್ತವಾಗಿದೆ. ಹಳದಿರಾಮ್​ ಕಂಪನಿ ಈ ಸಂಬಂಧ ಸೆಕ್ಟರ್​ 58 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಮಾಡಿದೆ.

ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಕಂಪನಿ ಸರ್ವರ್​​ನ್ನ ಬಳಸಿ ಹಣಕ್ಕೆ ಡಿಮ್ಯಾಂಡ್​ ಮಾಡಿದ್ದಾರೆ. ಕದ್ದ ಮಾಹಿತಿಯನ್ನ ಅಳಿಸಿ ಹಾಕೋಕೇ ಹ್ಯಾಕರ್ಸ್​ 7 ಲಕ್ಷದ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಅಂತಾ ಹಳದಿ ರಾಮ್​ ಕಂಪನಿ ಹೇಳಿದೆ.

ಈ ಸಂಬಂಧ ತನಿಖೆ ಕೈಗೆತ್ತಿಕ್ಕೊಂಡಿರೋ ನೋಯ್ಡಾ ಠಾಣೆ ಪೊಲೀಸರು ಹ್ಯಾಕರ್ಸ್​ಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ನೋಯ್ಡಾ ಹೆಚ್ಚುವರಿ ಪೊಲೀಸ್​ ಆಯುಕ್ತ ರಣವಿಜಯ್​ ಸಿಂಗ್​ ಆರೋಪಿಗಳ ವಿರುದ್ಧ ಸೆಕ್ಷನ್​ 420 ಹಾಗೂ 384 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಅಂತಾ ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...