alex Certify ಲೋಹದ ತ್ಯಾಜ್ಯದಿಂದ ಅರಳಿದೆ ಸುಂದರ ಕಲಾಕೃತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೋಹದ ತ್ಯಾಜ್ಯದಿಂದ ಅರಳಿದೆ ಸುಂದರ ಕಲಾಕೃತಿ

ಲೋಹದ ತ್ಯಾಜ್ಯಗಳಿಗೆ ಮರುರೂಪ ಕೊಟ್ಟು ಅವುಗಳನ್ನು ಸುಂದರ ಕಲಾಕೃತಿಗಳನ್ನಾಗಿ ಮಾಡುತ್ತಿರುವ ಗುರುಗ್ರಾಮದ ಕಲಾವಿದ ಗೋಪಾಲ್ ‌ಜೋಶಿ ಹೊಸದೊಂದು ಓಪನ್‌ ಏರ್‌ ಸ್ಟುಡಿಯೋದಲ್ಲಿ ಅವುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಕಳೆದ 25 ವರ್ಷಗಳಿಂದ ಕಲಾವಿದರಾಗಿರುವ ಗೋಪಾಲ್ ‌ಜೋಶಿ ತೈಲಚಿತ್ರಗಳು, ಕ್ಯಾನ್ವಾಸ್, ಪ್ಲಾಸ್ಟಿಕ್ ತ್ಯಾಜ್ಯ, ಕ್ಲಿಷ್ಠಕರ ಕಲಾಕೃತಿಗಳು ಸೇರಿದಂತೆ ಅನೇಕ ರೀತಿಯ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಆದರೆ ಲೋಹದ ತ್ಯಾಜ್ಯಗಳನ್ನು ಕಲಾಕೃತಿಗಳನ್ನಾಗಿ ಮಾಡಲು ಜೋಶಿಗೆ ವಿಶೇಷ ಆಸಕ್ತಿ.

ಜೈಪುರದಲ್ಲಿ ವಾಸವಿದ್ದ ವೇಳೆ ಈ ಲೋಹದ ಸ್ಕ್ರ‍್ಯಾಪ್‌ಗಳನ್ನು ವೆಲ್ಡಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರೊಂದಿಗೆ ಸಂವಹನ ನಡೆಸಿದ ‌ಜೋಶಿ, ಅವುಗಳನ್ನು ಬಳಸಿಕೊಂಡು ಸುಂದರ ಕಲಾಕೃತಿಗಳನ್ನು ರಚಿಸುವ ಬಗ್ಗೆ ಚಿಂತಿಸತೊಡಗಿದರು. ನವಿಲುಗಳ ಸರಣಿಯೊಂದಿಗೆ ತಮ್ಮ ಮೊದಲ ಕೆಲಸ ಆರಂಭಿಸಿದ ‌ಜೋಶಿ, ಇವುಗಳಿಗೆ ತುಕ್ಕು ಹಿಡಿದ ಕಬ್ಬಿಣದ ಸ್ಕ್ರ‍್ಯಾಪ್‌ಗಳನ್ನು ಬಳಸಿದ್ದರು.

ಆದಾಯ ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿ: ಫಾರ್ಮ 1,4 ಕ್ಕೆ ಆಫ್ಲೈನ್ ಸೇವೆ ಶುರು

ಇಂಥದ್ದೇ ತ್ಯಾಜ್ಯ ವಸ್ತುಗಳಿಂದ ಇಲ್ಲಿವರೆಗೂ ‌ಜೋಶಿಯವರು 150ಕ್ಕೂ ಹೆಚ್ಚು ಕಲಾಕೃತಿಗಳ ಗುಚ್ಛವನ್ನೇ ರಚಿಸಿದ್ದಾರೆ. ಹರಿಯಾಣಾದ ಡಮ್‌ಡಮಾ ಕೆರೆಯ ಬಳಿ ‌ಜೋಶಿಯವರು ಲೋಹದಲ್ಲಿ ರಚಿಸಿರುವ ವನ್ಯಪ್ರಾಣಿಗಳ ಕಲಾಕೃತಿಗಳನ್ನು ಇಡಲಾಗಿದೆ.

ಇವರು ರಚಿಸಿರುವ ’ಹರಿಯಾಣ್ವೀ ಟಾವು’ ಕಲಾಕೃತಿಯು 16 ಅಡಿ ಎತ್ತರವಿದ್ದು, 300 ಕೆಜಿಯಷ್ಟು ಲೋಹದ ಸ್ಕ್ರ‍್ಯಾಪ್‌ಗಳಿಂದ ರಚಿಸಲಾಗಿದೆ. ಬಹುತೇಕ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳಿಂದ ಈ ಲೋಹದ ತ್ಯಾಜ್ಯ ಸಂಗ್ರಹಿಸುವ ಜೋಶಿ ಸುಂದರ ಕಲಾಕೃತಿಗಳನ್ನು ಅವುಗಳಿಂದ ಅರಳಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...