alex Certify ಆದಾಯ ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿ: ಫಾರ್ಮ 1,4 ಕ್ಕೆ ಆಫ್ಲೈನ್ ಸೇವೆ ಶುರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆದಾಯ ತೆರಿಗೆ ಪಾವತಿದಾರರಿಗೆ ಮಹತ್ವದ ಸುದ್ದಿ: ಫಾರ್ಮ 1,4 ಕ್ಕೆ ಆಫ್ಲೈನ್ ಸೇವೆ ಶುರು

ಆದಾಯ ತೆರಿಗೆ ಇಲಾಖೆ 2020-21ರ ಆರ್ಥಿಕ ವರ್ಷಕ್ಕೆ ತೆರಿಗೆದಾರರ ಆದಾಯ ತೆರಿಗೆ ರಿಟರ್ನ್ ಫಾರ್ಮ್ -1 ಮತ್ತು ಐಟಿಆರ್ ಫಾರ್ಮ್ 4 ಭರ್ತಿ ಮಾಡಲು ಆಫ್‌ಲೈನ್ ಸೌಲಭ್ಯವನ್ನು ಪ್ರಾರಂಭಿಸಿದೆ.

ಈ ಆಫ್‌ಲೈನ್ ಸೌಲಭ್ಯವು ಇ-ಫೈಲಿಂಗ್ ಪೋರ್ಟಲ್‌ನಲ್ಲಿದೆ. ಇದು ಸಂಪೂರ್ಣವಾಗಿ ಹೊಸ ತಂತ್ರಜ್ಞಾನ JSON ಆಧರಿಸಿದೆ. ಡೇಟಾ ಸಂಗ್ರಹಿಸಲು ಇದು ಸುಲಭ. ಈ ಆಫ್‌ಲೈನ್ ವೈಶಿಷ್ಟ್ಯವನ್ನು ವಿಂಡೋಸ್ 7 ಮತ್ತು ನಂತರದ ಕಂಪ್ಯೂಟರ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು.

ಆದಾಯ ತೆರಿಗೆ ಇಲಾಖೆ ಈ ಆಫ್‌ಲೈನ್ ಸೌಲಭ್ಯವು ಐಟಿಆರ್ -1 ಮತ್ತು ಐಟಿಆರ್ -4 ಗೆ ಮಾತ್ರ ಸಿಗಲಿದೆ. ಐಟಿಆರ್ ಫಾರ್ಮ್ -1 (ಸಹಜ್) ಮತ್ತು ಐಟಿಆರ್ ಫಾರ್ಮ್ -4 (ಸುಗಮ್) ಸರಳವಾಗಿದೆ. ವಾರ್ಷಿಕ ಆದಾಯ 50 ಲಕ್ಷ ರೂಪಾಯಿಗಳಾಗಿದ್ದು, ಅವರು ಇದನ್ನು ಸಂಬಳ, ವಸತಿ ಆಸ್ತಿ ಮತ್ತು ಬಡ್ಡಿಯಂತಹ ಇತರ ಮೂಲಗಳಿಂದ ಗಳಿಸುತ್ತಿದ್ದರೆ ಅವರು ಸಹಜ್ ಫಾರ್ಮ್ ಭರ್ತಿ ಮಾಡಬೇಕು. ಐಟಿಆರ್ -4 ಫಾರ್ಮ್, ಅವಿಭಕ್ತ ಕುಟುಂಬ, ಕಂಪನಿಗಳಿಗಾಗಿ ಇದೆ. ಇವರ ವಾರ್ಷಿಕ ಆದಾಯ 50 ಲಕ್ಷ ರೂಪಾಯಿಯಾಗಿರಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...