alex Certify ಹದಿಹರೆಯದ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ: ಕಸದ ರಾಶಿಯಲ್ಲಿ ಭ್ರೂಣ ಎಸೆದ ವೈದ್ಯ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹದಿಹರೆಯದ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ: ಕಸದ ರಾಶಿಯಲ್ಲಿ ಭ್ರೂಣ ಎಸೆದ ವೈದ್ಯ ಅರೆಸ್ಟ್

 ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಅಪ್ರಾಪ್ತ ಬಾಲಕಿಯ ಗರ್ಭಪಾತ ಮಾಡಿ ಕಸ ಹಾಕುವ ಸ್ಥಳದಲ್ಲಿ ಭ್ರೂಣವನ್ನು ಎಸೆದ ಆರೋಪದ ಮೇಲೆ 59 ವರ್ಷದ ವೈದ್ಯನನ್ನು ಬಂಧಿಸಲಾಗಿದೆ.

15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಗರ್ಭಪಾತ ಎಸಗಿದ ಪ್ರಕರಣದಲ್ಲಿ ಅಹಮದಾಬಾದ್ ಪೋಲಿಸರು 19 ವರ್ಷದ ಯುವಕ ಮತ್ತು ವೈದ್ಯ ಡಾ. ಚೇತನ್ ಶಾ ಅವರನ್ನು ಶನಿವಾರ ಬಂಧಿಸಿದ್ದಾರೆ. 5 ತಿಂಗಳ ಗರ್ಭಿಣಿಯಾಗಿದ್ದ ಬಾಲಕಿಯ ಗರ್ಭಪಾತ ನಡೆಸಿ ಭ್ರೂಣವನ್ನು ಕಸ ಎಸೆಯುವ ಸ್ಥಳದಲ್ಲಿ ಬಿಸಾಕಿದ್ದರು. ಮಣಿ ನಗರದ ನಿವಾಸಿಯಾಗಿರುವ ಡಾ. ಚೇತನ್ 29 ವರ್ಷಗಳಿಂದ ಆಸ್ಪತ್ರೆ ನಡೆಸುತ್ತಿದ್ದಾರೆ.

ಜುಲೈ 6 ರಂದು ಹದಿಹರೆಯದ ಹುಡುಗಿಯ ಗರ್ಭಪಾತ ಮಾಡಿ ಭ್ರೂಣವನ್ನು ತೆಗೆದ ಅವರು ತಮ್ಮ ಕಾರಿನಲ್ಲಿ ಮನೆಗೆ ಹೋಗುವಾಗ ಕಸ ಎಸೆಯುವ ಸ್ಥಳದಲ್ಲಿ ರಹಸ್ಯವಾಗಿ ಭ್ರೂಣವನ್ನು ಎಸೆದು ಹೋಗಿದ್ದರು. ಇದಕ್ಕಾಗಿ 15,000 ರೂ. ಪಡೆದುಕೊಂಡಿದ್ದರು. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಶನಿವಾರ ವೈದ್ಯನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಪ್ರಾಪ್ತ ಬಾಲಕಿಯ ಭ್ರೂಣ ತೆಗೆದು ಎಸೆದಿರುವುದು ಗೊತ್ತಾಗಿದೆ. ಬಾಲಕಿ ಗರ್ಭಿಣಿ ಆಗಲು ಕಾರಣರಾದ ಸುನಿಲ್ ಸರ್ಗರಾ ಎಂಬ ಯುವಕನನ್ನು ಬಂಧಿಸಲಾಗಿದೆ. ಪೋಕ್ಸೋ, ಅತ್ಯಾಚಾರ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...