ಮದುವೆ ಅಂತಾ ಅಂದಮೇಲೆ ಅಲ್ಲಿ ಕ್ಯಾಮೆರಾಮನ್ ಇರ್ಲಿಲ್ಲ ಅಂದರೆ ಹೇಗೆ ಹೇಳಿ..? ಮದುವೆ ಮನೇಲಿ ವಧು ವರರಷ್ಟೇ ಪ್ರಾಮುಖ್ಯತೆ ಫೋಟೋಗ್ರಾಫರ್ಸ್ಗೂ ಇರುತ್ತೆ. ಮದುವೆಯ ಸುಂದರ ಕ್ಷಣಗಳ ನೆನಪಿನ ಬುತ್ತಿಯನ್ನ ಕಟ್ಟಿಕೊಡುವ ಜವಾಬ್ದಾರಿ ಇವರ ಮೇಲೆ ಇರುತ್ತೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ವಧುವಿನ ಫೋಟೋವನ್ನ ಕ್ಲಿಕ್ಕಿಸಲು ಹೋದ ಕ್ಯಾಮರಾಮನ್ ವರನ ಬಳಿ ಧರ್ಮದೇಟನ್ನ ತಿಂದಿದ್ದಾನೆ.
ಮಂಟಪದಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ಕ್ಯಾಮರಾಮನ್ ವಧುವಿನ ಹತ್ತಿರಕ್ಕೆ ಹೋಗಿದ್ದಾನೆ. ಫೋಟೋ ತೆಗೆಯೋದ್ರಲ್ಲಿ ಕ್ಯಾಮರಾಮನ್ ಮಗ್ನನಾಗಿದ್ರೆ ಕೋಪಗೊಂಡ ವರ ಮಾತ್ರ ಫೋಟೋಗ್ರಾಫರ್ಗೆ ಗೂಸಾ ನೀಡಿದ್ದಾನೆ. ಇದನ್ನ ನೋಡಿದ ವಧು ಬಿದ್ದು ಬಿದ್ದು ನಕ್ಕಿದ್ದಾಳೆ.
ಗೆಳೆಯನ ಆರತಕ್ಷತೆ ಕಾರ್ಯಕ್ರಮಕ್ಕೆ ವಿಚಿತ್ರ ಉಡುಗೊರೆ ನೀಡಿ ಸುದ್ದಿಯಾದ ಸ್ನೇಹಿತರು….!
ಈ ವಿಡಿಯೋ ನೋಡಿದ ನೆಟ್ಟಿಗರಲ್ಲಿ ಅನೇಕರು ಇದು ಬಹುಶಃ ಪೂರ್ವನಿಯೋಜಿತ ಕಾಮಿಡಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ವಧು ಪರಿಸ್ಥಿತಿಯನ್ನ ಚೆನ್ನಾಗಿ ನಿಭಾಯಿಸುವ ಮೂಲಕ ಫೋಟೋಗ್ರಾಫರ್ ಜೀವ ಕಾಪಾಡಿದ್ದಾಳೆ ಎಂದು ಹೇಳ್ತಿದ್ದಾರೆ.
https://twitter.com/i/status/1357675009905291264