alex Certify ಮಗುವಿನ ಮೇಲೆ ಅಜ್ಜಿ – ತಾತ ಪೋಷಕರಂತೆ ಹಕ್ಕು ಚಲಾಯಿಸಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ಮೇಲೆ ಅಜ್ಜಿ – ತಾತ ಪೋಷಕರಂತೆ ಹಕ್ಕು ಚಲಾಯಿಸಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಅಜ್ಜಿ ಹಾಗೂ ಮೊಮ್ಮಕ್ಕಳ ನಡುವಿನ ಸಂಬಂಧ ಬಹಳವೇ ವಿಶೇಷವಾಗಿರುತ್ತೆ. ಹಾಗಂತ ಈ ಸಂಬಂಧವು ಪೋಷಕರು ಹಾಗೂ ಮಗುವಿನ ನಡುವಿನ ಸಂಬಂಧಕ್ಕೆ ಸರಿದೂಗಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್​ ಆದೇಶ ನೀಡಿದೆ. ಈ ಮೂಲಕ ನಾಸಿಕ್​ನ ನಿವಾಸಿಗೆ ತಮ್ಮ 12 ವರ್ಷದ ಮೊಮ್ಮಗುವನ್ನ ಪೋಷಕರ ಕೈಗೊಪ್ಪಿಸುವಂತೆ ಹೇಳಿದೆ.

ಅಜ್ಜಿ ತನ್ನ ಮೊಮ್ಮಗುವನ್ನ ಪೋಷಕರಿಗೆ ನೀಡಲು ನಿರಾಕರಿಸಿದ ಬಳಿಕ ದಂಪತಿ ಈ ವರ್ಷದ ಆರಂಭದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. 12 ವರ್ಷದ ಮಗುವಿನ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆಕೆಗೆ ವಿಶ್ರಾಂತಿಯ ಅಗತ್ಯವಿದ್ದಿದ್ದರಿಂದ 2019ರಲ್ಲಿ ಮಗುವನ್ನ ತಾತ್ಕಾಲಿಕವಾಗಿ ತನ್ನ ತಾಯಿಯ ಬಳಿ ಬಿಟ್ಟಿದ್ದಳು.

ಇದಾದ ಬಳಿಕ ಬಾಲಕ ನಾಶಿಕ್​ನಲ್ಲೇ ವ್ಯಾಸಂಗ ಆರಂಭಿಸಿದ್ದ. ತಾಯಿ ಚೇತರಿಸಿಕೊಂಡ ಬಳಿಕ ಮಹಿಳೆ ಹಾಗೂ ಮಗು 2020-21ನೇ ಶೈಕ್ಷಣಿಕ ವರ್ಷದಿಂದ ಪುಣೆಗೆ ಮರಳಲು ಸಿದ್ಧರಾಗಿದ್ದರು. ಆದರೆ ಕೊರೊನಾದಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಮೇ 2020ರಲ್ಲಿ ಮಹಿಳೆ ಪುಣೆಗೆ ಮರಳಿದ್ದರು. ಮಗುವನ್ನ ಪುಣೆಯ ಅಂತಾರಾಷ್ಟ್ರೀಯ ಶಾಲೆಯಲ್ಲಿ ದಾಖಲು ಮಾಡಿ ನಾಸಿಕ್​ನಲ್ಲಿ ಆನ್​ಲೈನ್​ ಶಿಕ್ಷಣ ನೀಡಲಾಗ್ತಿತ್ತು.

ಪೋಷಕರು ಮಗುವನ್ನ ವಾಪಸ್​ ಮನೆಗೆ ಕರೆತರಲು ನಾಸಿಕ್​ಗೆ ಹೋದಾಗ ಅಜ್ಜಿ ಇದ್ದಕ್ಕೆ ಅಡ್ಡಿಪಡಿಸಿದ್ದಾರೆ. ಮಾತ್ರವಲ್ಲದೇ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿಯನ್ನ ಸಂಪರ್ಕಿಸಿ, ಈ ದಂಪತಿ ನಡುವೆ ವೈಮನಸ್ಯ ಇದೆ. ಹೀಗಾಗಿ 12 ವರ್ಷದ ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಗುವಿನ ಹಿತದೃಷ್ಟಿಯಿಂದ ನಾನೇ ಈತನನ್ನ ನೋಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದರು.

ಇದಾದ ಬಳಿಕ ದಂಪತಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಪೀಠ ಮಗು ಹೆತ್ತವರೊಂದಿಗೆ ಇರೋದೇ ಸೂಕ್ತ ಎಂದು ಹೇಳಿದೆ. ಬಾಲಕನ ತಂದೆ ಐಟಿ ಕಂಪನಿಯಲ್ಲಿ ಹಿರಿಯ ಎಲೆಕ್ಟ್ರಿಕಲ್​ ಇಂಜಿನಿಯರ್​ ಆಗಿದ್ದರೆ ಅಜ್ಜಿ ಅನಕ್ಷರಸ್ಥೆ ಮಾತ್ರವಲ್ಲದೇ ಆರ್ಥಿಕವಾಗಿಯೂ ದುರ್ಬಲರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...