alex Certify Good News: ಮಹಾರಾಷ್ಟ್ರದ ಈ ಜಿಲ್ಲೆಯ 90 ಹಳ್ಳಿಗಳಲಿಲ್ಲ ಒಂದೇ ಒಂದು ಕೊರೊನಾ ಪ್ರಕರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಮಹಾರಾಷ್ಟ್ರದ ಈ ಜಿಲ್ಲೆಯ 90 ಹಳ್ಳಿಗಳಲಿಲ್ಲ ಒಂದೇ ಒಂದು ಕೊರೊನಾ ಪ್ರಕರಣ….!

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 48 ಸಾವಿರ ಗಡಿ ದಾಟಿದೆ. ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಸೋಂಕಿತರ ಸಂಖ್ಯೆ ಮಹಾರಾಷ್ಟ್ರದಲ್ಲಿದೆ. ಆದ್ರೆ ಮಹಾರಾಷ್ಟ್ರದ ಭಂಡಾರ ಜಿಲ್ಲೆ ಜನರಿಗೆ ಭೇಷ್ ಹೇಳಲೇಬೇಕು. ಭಂಡಾರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣವಿಲ್ಲ.

ಈ ಜಿಲ್ಲೆಯಲ್ಲಿ 90 ಹಳ್ಳಿಗಳಿದ್ದು, ಒಂದೇ ಒಂದು ಹಳ್ಳಿಯಲ್ಲೂ ಸೋಂಕಿತರಿಲ್ಲ. ಅಲ್ಲಿನ ಜನರು ಸುರಕ್ಷಿತವಾಗಿದ್ದಾರೆ. ಎಲ್ಲರೂ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಜನರು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿದ್ದಾರೆ. ಹಳ್ಳಿಯ ಪ್ರತಿಯೊಬ್ಬರೂ ಮಾಸ್ಕ್ ಧರಿಸುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಗ್ರಾಮಗಳನ್ನು ಸಮಯ ಸಮಯಕ್ಕೆ ಸ್ವಚ್ಛಗೊಳಿಸಲಾಗ್ತಿದೆ. ಕೆಲಸಕ್ಕೆ ಹೋಗುವ ಜನರಿಗೆ ಎಚ್ಚರಿಕೆ ನೀಡಲಾಗಿದ್ದು,ಅವರ ಮೇಲೆ ನಿಗಾ ಇಡಲಾಗಿದೆ.

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರೂ ಕೊರೊನಾ ನಿಯಮಗಳನ್ನು ನೂರರಷ್ಟು ಪಾಲಿಸಿದ್ದಾರೆ. ಮನೆಯಿಂದ ಹೊರ ಬರುವ ವೇಳೆ ಮಾಸ್ಕ್ ಧರಿಸುತ್ತಾರೆ. ಜಿಲ್ಲೆಯಲ್ಲಿ ಲಸಿಕೆ ಅಭಿಯಾನಕ್ಕೆ ಒತ್ತು ನೀಡಲಾಗ್ತಿದೆ. ಈ ಬಗ್ಗೆ ಜಾಗೃತಿ ಅಭಿಯಾನ ನಡೆಸಲಾಗ್ತಿದೆ. ಎಲ್ಲ ಎಚ್ಚರಿಕೆ ತೆಗೆದುಕೊಂಡಲ್ಲಿ ಕೊರೊನಾ ಕಾಟದಿಂದ ತಪ್ಪಿಸಿಕೊಳ್ಳಬಹುದೆಂಬ ಭರವಸೆ ಜನರಲ್ಲಿ ಮೂಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...