ತಾವು ಮಾಡಿದ ಮಾನವೀಯ ಕಾರ್ಯದಿಂದಾಗಿ ಇಂಟರ್ನೆಟ್ನಲ್ಲಿ ಹೈದರಾಬಾದ್ನ ಟ್ರಾಫಿಕ್ ಕಾನ್ಸ್ಟೇಬಲ್ ಎಸ್. ಮಹೇಶ್ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆಯನ್ನ ಸಂಪಾದಿಸುತ್ತಿದ್ದಾರೆ.
ಟ್ವಿಟರ್ನಲ್ಲಿ ತೆಲಂಗಾಣ ಪೊಲೀಸರು ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಇದರಲ್ಲಿ ಇಬ್ಬರು ಅನಾಥ ಮಕ್ಕಳು ಎಲ್ಲರ ಬಳಿಯಲ್ಲಿ ಊಟಕ್ಕಾಗಿ ಬೇಡುತ್ತಿರೋದನ್ನ ಪೊಲೀಸ್ ಕಾನ್ಸ್ಟೇಬಲ್ ನೋಡಿದ್ದಾರೆ. ಈ ಮಕ್ಕಳ ಬಳಿಗೆ ತೆರಳಿದ ಮಹೇಶ್ ಕುಮಾರ್ ತಮ್ಮ ಊಟದ ಡಬ್ಬಿಯನ್ನ ತೆಗೆದು ಮಕ್ಕಳಿಗೆ ಊಟವನ್ನ ನೀಡಿದ್ದಾರೆ.
ಸೋಮಯಾಜಿಗುಡ ಏರಿಯಾದಲ್ಲಿ ಗಸ್ತು ತಿರುಗುವ ಡ್ಯೂಟಿಯಲ್ಲಿದ್ದ ವೇಳೆ ಮಹೇಶ್ ಕುಮಾರ್ ಈ ಮಾನವೀಯ ಕಾರ್ಯ ಮಾಡಿದ್ದಾರೆ.
ಮದುವೆ ನೆಪದಲ್ಲಿ ದೈಹಿಕ ಸಂಬಂಧ: ಯುವತಿ ಮೇಲೆ 8 ತಿಂಗಳು ಅತ್ಯಾಚಾರ, ಯುವಕನ ವಿರುದ್ಧ ದೂರು
ಪಂಜಗುಟ್ಟಾ ಟ್ರಾಫಿಕ್ ಪೊಲೀಸ್ ಪೇದೆ ಮಹೇಶ್ ಸೋಮಯಾಜಿಗುಡಾದಲ್ಲಿ ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಇಬ್ಬರು ಮಕ್ಕಳು ಎಲ್ಲರ ಬಳಿ ಊಟಕ್ಕಾಗಿ ಬೇಡುತ್ತಿರೋದನ್ನ ಗಮನಿಸಿದ್ದಾರೆ. ಕೂಡಲೇ ಮಕ್ಕಳ ಬಳಿ ತೆರಳಿದ ಮಹೇಶ್, ಅವರಿಗೆ ತಮ್ಮ ಊಟದ ಡಬ್ಬಿಯಲ್ಲಿದ್ದ ಊಟವನ್ನ ನೀಡಿದ್ದಾರೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮಹೇಶ್, ಆ ಮಕ್ಕಳು ಊಟಕ್ಕಾಗಿ ಹುಡುಕಾಡುತ್ತಿರೋದನ್ನ ಗಮನಿಸಿದೆ. ಆವತ್ತು ನಾನು ರಾತ್ರಿ ಊಟ ಮಾಡೋದು ಒಂದು ಗಂಟೆ ತಡವಾಯ್ತು ಅಷ್ಟೇ. ಆದರೆ ಒಂದು ವೇಳೆ ನಾನು ಮಕ್ಕಳಿಗೆ ಊಟವನ್ನ ನೀಡಿಲ್ಲವಾಗಿದ್ದರೆ ಅವರು ಹಸಿದುಕೊಂಡೇ ಮಲಗಬೇಕಿತ್ತು ಎಂದು ಹೇಳಿದ್ರು.