alex Certify ಮದುವೆ ನೆಪದಲ್ಲಿ ದೈಹಿಕ ಸಂಬಂಧ: ಯುವತಿ ಮೇಲೆ 8 ತಿಂಗಳು ಅತ್ಯಾಚಾರ, ಯುವಕನ ವಿರುದ್ಧ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ನೆಪದಲ್ಲಿ ದೈಹಿಕ ಸಂಬಂಧ: ಯುವತಿ ಮೇಲೆ 8 ತಿಂಗಳು ಅತ್ಯಾಚಾರ, ಯುವಕನ ವಿರುದ್ಧ ದೂರು

ಅಮೇಥಿ: ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಶುಕುಲ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಮದುವೆಯಾಗುವುದಾಗಿ ನಂಬಿಸಿ 18 ವರ್ಷದ ಯುವತಿಯ ಮೇಲೆ 8 ತಿಂಗಳ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

ದೂರು ದಾಖಲಿಸಿರುವ ಯುವತಿ ನೀಡಿರುವ ಮಾಹಿತಿಯಂತೆ, ಮದುವೆಯಾಗುವುದಾಗಿ ನಂಬಿಸಿದ್ದ ಯುವಕ 8 ತಿಂಗಳು ಅತ್ಯಾಚಾರ ಎಸೆಗಿದ್ದಾನೆ. ನಂತರದಲ್ಲಿ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಮಾಹಿತಿಯನ್ನು ಕುಟುಂಬ ಸದಸ್ಯರಿಗೆ ತಿಳಿಸಿದಾಗ ಅವರು ನಿಂದಿಸಿದ್ದಾರೆ ಎಂದು ತಿಳಿಸಿದ್ದಾಳೆ.

ಅತ್ಯಾಚಾರ ಸೇರಿದಂತೆ ಐಪಿಸಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶುಕುಲ್ ಗಂಜ್ ಠಾಣೆಯ ಅಧಿಕಾರಿ ವಿಶ್ವನಾಥ್ ಯಾದವ್ ಈ ಬಗ್ಗೆ ಮಾಹಿತಿ ನೀಡಿದ್ದು, ಯುವತಿಗೆ ನಂಬಿಸಿದ್ದ ಆರೋಪಿ 8 ತಿಂಗಳು ಅತ್ಯಾಚಾರ ಎಸಗಿದ್ದಾನೆ. ಆಘಾತಕಾರಿ ಸಂಗತಿಯೆಂದರೆ ಆಕೆಯ ಕುಟುಂಬ ಸದಸ್ಯರು ವಿಷಯ ಗೊತ್ತಾದ ನಂತರ ನಿಂದಿಸಿದ್ದಾರೆ. ಬಳಿಕ ಪೊಲೀಸರನ್ನು ಸಂಪರ್ಕಿಸಿ ಯುವತಿ ದೂರು ನೀಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...