alex Certify ಅಪಹರಣಕ್ಕೊಳಗಾದ ಬರೋಬ್ಬರಿ 3 ತಿಂಗಳ ಬಳಿಕ ಪೋಷಕರ ಸೇರಿದ ಬಾಲಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಹರಣಕ್ಕೊಳಗಾದ ಬರೋಬ್ಬರಿ 3 ತಿಂಗಳ ಬಳಿಕ ಪೋಷಕರ ಸೇರಿದ ಬಾಲಕಿ…!

ಉತ್ತರ ಪ್ರದೇಶದ ಹಮೀರ್​ಪುರ ಗ್ರಾಮದಿಂದ ಸೆಪ್ಟೆಂಬರ್​ ತಿಂಗಳಿನಲ್ಲಿ ಕಿಡ್ನಾಪ್​ ಆಗಿದ್ದ 15 ವರ್ಷದ ಬಾಲಕಿಯನ್ನ ಪೊಲೀಸರು ಮಹಾರಾಷ್ಟ್ರದ ಸೋಲಾಪುರದಲ್ಲಿ ಪತ್ತೆ ಹಚ್ಚಿದ್ದಾರೆ.

ಪ್ರಕರಣ ಸಂಬಂಧ  ಇಬ್ಬರು    ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರನ್ನ ಸಂಜಯ್ (21) ಹಾಗೂ ದಿನೇಶ್​(22) ಎಂದು ಗುರುತಿಸಲಾಗಿದೆ.

ಬಾಲಕಿಯ ನೆರೆಮನೆಯವನಾದ ಸಂಜಯ್​ ತನ್ನ ಸ್ನೇಹಿತ ದಿನೇಶ್​ ಜೊತೆ ಸೇರಿ ಬಾಲಕಿಯನ್ನ ಅಪಹರಣ ಮಾಡಿದ್ದ. ಈ ಸಂಬಂಧ ಬಾಲಕಿಯ ತಂದೆ ಸೆಪ್ಟೆಂಬರ್ 3ರಂದು ಪ್ರಕರಣ ದಾಖಲಿಸಿದ್ದರು ಅಂತಾ ಪೊಲೀಸ್​ ಅಧಿಕಾರಿ ವೀರೇಂದ್ರ ಪ್ರತಾಪ್​ ಸಿಂಗ್​ ಮಾಹಿತಿ ನೀಡಿದ್ರು.

ಬಾಲಕಿಯನ್ನ ರಕ್ಷಿಸಲಾಗಿದ್ದು ಸೋಲಾಪುರದಲ್ಲಿ ದಿನೇಶ್​​ನನ್ನ ಹಾಗೂ ಸಂಜಯ್​ನನ್ನ ಆತನ ಹಳ್ಳಿಯಿಂದಲೇ ಬಂಧಿಸಿ ಜೈಲಿಗಟ್ಟಲಾಗಿದೆ. ಬಾಲಕಿ ನೀಡಿದ ಮಾಹಿತಿ ಆಧರಿಸಿ ಆರೋಪಿಗಳ ವಿರುದ್ಧ ಪೋಸ್ಕೋ ಆಕ್ಟ್​ನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...