alex Certify ಭಾವಿ ಪತಿಯ ಜೊತೆ ಸೇರಿ ಮಾಜಿ ಗೆಳೆಯನನ್ನೇ ಕೊಂದ ಯುವತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವಿ ಪತಿಯ ಜೊತೆ ಸೇರಿ ಮಾಜಿ ಗೆಳೆಯನನ್ನೇ ಕೊಂದ ಯುವತಿ….!

ಉತ್ತರ ಪ್ರದೇಶ ಘಾಜಿಯಾಬಾದ್​ ಜಿಲ್ಲೆಯ ಮನೆಯೊಂದರಲ್ಲಿ ತನ್ನ ಮಾಜಿ ಗೆಳೆಯನನ್ನ ಪಾರ್ಟಿಗೆ ಆಹ್ವಾನಿಸಿದ ಗೆಳತಿ ಆತನನ್ನ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಮೃತ ಯುವಕನನ್ನ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ 22 ವರ್ಷದ ನಿತಿನ್​ ಚೌಧರಿ ಎಂದು ಗುರುತಿಸಲಾಗಿದೆ. ಈತನ ಶವವನ್ನ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.

ನಿತಿನ್​ ಚೌಧರಿಯ ಮಾಜಿ ಗೆಳತಿ ಬೇರೊಬ್ಬನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ ಸಹ ಆಕೆಯನ್ನ ಮದುವೆಯಾಗುವಂತೆ ಮೃತ ನಿತಿನ್​ ಚೌಧರಿ ಪೀಡಿಸುತ್ತಿದ್ದ ಎನ್ನಲಾಗಿದೆ.

ಹೀಗಾಗಿ ತನ್ನ ಭಾವಿ ಪತಿಯ ಜೊತೆ ಈ ವಿಚಾರವನ್ನ ಶೇರ್​ ಮಾಡಿದ ಯುವತಿ ಮರ್ಡರ್​ಗೆ ಪ್ಲಾನ್​ ಮಾಡಿದ್ದಾಳೆ.
ಪ್ಲಾನ್​ ಪ್ರಕಾರ ಯುವತಿ ಹಾಗೂ ಆಕೆಯ ಭಾವಿ ಪತಿ ಸನ್ನಿ ನಿತಿನ್​ನ್ನು ಪಾರ್ಟಿಯೊಂದಕ್ಕೆ ಆಹ್ವಾನಿಸಿದ್ದಾರೆ. ಆತನಿಗೆ ಬಲವಂತವಾಗಿ ಮದ್ಯಪಾನ ಮಾಡಿಸಿ ಬಳಿಕ ಆತನನ್ನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಹೆತ್ತ ಮಗಳನ್ನೇ ಗರ್ಭಿಣಿ ಮಾಡಿದ ಪಾಪಿ ತಂದೆ ಅಂದರ್..​..!

ಪ್ರಕರಣ ಸಂಬಂಧ 56 ವರ್ಷದ ಆರೋಪಿ ವಿನೋದ್​ ಕುಮಾರ್​ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಆದರೆ ಆರೋಪಿ ಮಹಿಳೆ ಹಾಗೂ ಆತನ ಭಾವಿ ಪತಿ ನಾಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...