alex Certify ಜಾರ್ಖಂಡ್: ಜುರಾಸಿಕ್ ಕಾಲದ ಪಳೆಯುಳಿಕೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾರ್ಖಂಡ್: ಜುರಾಸಿಕ್ ಕಾಲದ ಪಳೆಯುಳಿಕೆ ಪತ್ತೆ

Geologists Discover Fossilised Leaves From Jurassic Period in Jharkhand

ಜುರಾಸಿಕ್ ಪಾರ್ಕ್ ಕಾಲದ ಎಲೆಗಳ ಪಳೆಯುಳಿಕೆಗಳನ್ನು ಭೂವಿಜ್ಞಾನ ಸಂಶೋಧಕರು ಜಾರ್ಖಂಡ್‌ನಲ್ಲಿ ಪತ್ತೆ ಮಾಡಿದ್ದಾರೆ. ಈ ಪಳೆಯುಳಿಕೆಗಳು 150-200 ದಶಲಕ್ಷ ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ.

ಇಲ್ಲಿನ ಶಾಹಿಬ್‌ಗಂಜ್‌ ಜಿಲ್ಲೆಯ ದುಢ್ಕೋಲ್ ಬೆಟ್ಟಗಳ ಶ್ರೇಣಿಯಲ್ಲಿ ಪತ್ತೆಯಾದ ಈ ಎಲೆಗಳನ್ನು ಟೈಲೋಫೈಲಮ್ ಜೀನಸ್‌ಗೆ ಸೇರಿದ್ದವೆಂದು ಇಲ್ಲಿನ ಪಿಜಿ ಕಾಲೇಜಿನ ಸಹ ಪ್ರಾಧ್ಯಾಪಕ ರಂಜಿತ್‌ ಕುಮಾರ್ ಹೇಳಿದ್ದಾರೆ‌.

ಲಖನೌನಲ್ಲಿರುವ ರಾಷ್ಟ್ರೀಯ ಸಸ್ಯವಿಜ್ಞಾನ ಸಂಸ್ಥೆ ಈ ಶೋಧನೆಯಲ್ಲಿ ಜೊತೆಗೂಡಿದ್ದು, ಕೇಂದ್ರ ಸರ್ಕಾರದ ವಿಜ್ಞಾನ & ತಂತ್ರಜ್ಞಾನ ಮಂತ್ರಾಲಯದ ಪ್ರಾಜೆಕ್ಟ್‌ ಒಂದರಡಿ ಕೆಲಸ ಸಾಗುತ್ತಿದೆ. ಈ ಎಲೆಗಳನ್ನು ಸಸ್ಯಹಾರಿ ಡೈನೋಸಾರ್‌ಗಳು ಸೇವಿಸುತ್ತಿದ್ದವು ಎನ್ನಲಾಗಿದೆ.

“ಅಪ್ಪರ್‌ ಜುರಾಸಿಕ್‌ನಿಂದ ಕ್ರಟೇಷಿಯಸ್‌‌ಗಳ ಕಾಲಕ್ಕೆ ಸೇರಿದ ಸಣ್ಣ ಪಳೆಯುಳಿಕೆಗಳು ಈ ಜಾಗದಲ್ಲಿ ಸಿಕ್ಕಿವೆ. ಮುಂದಿನ ದಿನಗಳಲ್ಲಿ ಡೈನೋಸಾರ್‌ನ ಮೊಟ್ಟೆಯ ಪಳೆಯುಳಿಕೆಗಳನ್ನೂ ಸಹ ನಾವು ಪತ್ತೆ ಮಾಡುವ ಸಾಧ್ಯತೆ ಇದೆ” ಎಂದು ಸಿಂಗ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...